ಕಾಮ ಪ್ರವೀಣ ಪ್ರಿನ್ಸಿ, ಚಾಲಾಕಿ ಹುಡುಗರು!

ಪ್ರಿನ್ಸಿಪಾಲ್ ಕಾಮ ಕೇಳಿಯಲ್ಲಿ ತೊಡಗಿರುವ ದೃಶ್ಯಗಳನ್ನು ಚಿತ್ರೀಕರಿಸಿರುವ ವಿದ್ಯಾರ್ಥಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಾ ಆನಂದ ಅನುಭವಿಸುತ್ತಿದ್ದಾರೆ. ಈ ನಡುವೆ ಪ್ರಿನ್ಸಿ ಜೊತೆ ಕಾಮಕ್ರೀಡೆಯಲ್ಲಿ ತೊಡಗಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದಾಳೆ. ವಿದ್ಯಾರ್ಥಿಗಳ ಬ್ಲ್ಯಾಕ್ ಮೇಲ್ ಬೇಡಿಕೆ ಮಿತಿ ಮೀರಿದಾಗ ಎಚ್ಚೆತ್ತುಕೊಂಡ ಪ್ರಿನ್ಸಿ, ಕೊನೆಗೂ ಪೊಲೀಸ್ ಮೊರೆ ಹೊಕ್ಕಿದ್ದಾರೆ.
ಘಟನೆ ಸವಿವರ: ಪ್ರಾಂಶುಪಾಲನೊಂದಿಗೆ ಕಾಮ ಕೇಳಿ ಆಡಿದ ಮಹಿಳೆ ಈ ವಿಚಾರವನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದಳು. ಈ ಸಂದರ್ಭವನ್ನು ಬಳಸಿಕೊಂಡ ವಿದ್ಯಾರ್ಥಿಗಳು ಇವರ ಕಾಮ ಕೇಳಿ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ನಂತರ ಇದನ್ನು ವಿಡಿಯೋ ಕ್ಲಿಪ್ಪಿಂಗ್ಸ್ ಮುಂದಿಟ್ಟುಕೊಂಡು ಪ್ರಾಂಶುಪಾಲರಿಗೆ ಹಣದ ಬೇಡಿಕೆ ಮುಂದಿಟ್ಟಿದ್ದಾರೆ.
ತನ್ನ ಕಾಮಕೇಳಿ ದೃಶ್ಯ ಎಲ್ಲಾ ಮೊಬೈಲ್‌ಗಳಲ್ಲಿ ಬಿತ್ತರವಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಗಳ ಬ್ಲ್ಯಾಕ್ ಮೇಲ್‌ಗೆ ಮಣಿದು ಒಂದಷ್ಟು ಹಣವನ್ನು ಪ್ರಾಂಶುಪಾಲರು ನೀಡಿದ್ದಾರೆ. ಆದರೆ ಕ್ರಮೇಣ ವಿದ್ಯಾರ್ಥಿಗಳ ಬ್ಲ್ಯಾಕ್‌ಮೇಲ್ ಒತ್ತಡ ಹೆಚ್ಚಿ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಬಂದಿದೆ. ಇದರಿಂದ ಕಂಗಾಲಾದ ಪ್ರಾಂಶುಪಾಲ ಪೊಲೀಸರ ಮೊರೆ ಹೋಗಿದ್ದು, ಈ ಸಂಬಂಧ ಈಗಾಗಲೇ ಮೂರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಮಹಿಳೆ ಹಿನ್ನೆಲೆ: ಆ ಮಹಿಳೆ ಗಂಗೊಳ್ಳಿಯ ತ್ರಾಸಿ ಮೂಲದವಳಾಗಿದ್ದು, ಈಕೆಯ ಗಂಡ ಕೆಲವು ವರ್ಷಗಳ ಹಿಂದೆ ತಾಯಿಯನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಉಡುಪಿ ಜೈಲಿನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಈ ಮಹಿಳೆ ಈಗಾಗಲೇ ಹಲವು ಯುವಕರ ಸಂಪರ್ಕ ಹೊಂದಿದ್ದಾಳೆ ಎಂದು ಹೇಳಲಾಗುತ್ತಿದೆ.
ಆದರೆ, ಬಂಧಿತ ವಿದ್ಯಾರ್ಥಿಗಳ ಮಾಹಿತಿ ಇನ್ನೂ ಸಿಕ್ಕಿಲ್ಲ. ಈ ಪ್ರಕರಣ ಕುಂದಾಪುರ ತಾಲೂಕಿನಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಪ್ರಿನ್ಸಿಪಾಲ್ ಕಾಮದಾಸೆ, ಬ್ಲ್ಯಾಕ್ ಮೇಲ್ ಪ್ರಕರಣ ದಿಂದ ತಾಲೂಕಿನ ಮರ್ಯಾದೆ ಮಣ್ಣುಪಾಲಾಯಿತು ಎಂದು ಜನ ಸಾರ್ವಜನಿಕವಾಗಿ ಛೀಮಾರಿ ಹಾಕಿದ್ದಾರೆ.











Click it and Unblock the Notifications