ಗಾಂಧಿ ಪುಸ್ತಕ ನಿಷೇಧಕ್ಕೆ ಗಾಂಧಿ ವಿರೋಧ!
ಪುಣೆ,
ಮಾ.31 : 'ಗ್ರೇಟ್ ಸೋಲ್, ಮಹಾತ್ಮ ಗಾಂಧಿ : ಹಿಸ್ ಸ್ಟ್ರಗಲ್ ವಿಥ್ ಇಂಡಿಯಾ" ಎಂಬ ವಿವಾದಿತ ಪುಸ್ತಕವನ್ನು ನಿಷೇಧಿಸಲು ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ಮುಂದಾಗಿದೆ. ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ರಾಷ್ಟ್ರಪಿತನ ಸ್ಮರಣೆಯನ್ನು ಕೀಳಾಗಿ ಕಾಣಲಾಗಿದೆ. ಈ ಅವಮಾನವನ್ನು ಸಹಿಸಲಾಗದು ಎಂದಿದ್ದಾರೆ. ಆದರೆ, ಮಹಾತ್ಮಾ ಗಾಂಧೀಯ ಮರಿಮೊಮ್ಮಗ ತುಷಾರ್ ಗಾಂಧೀ ಮಾತ್ರ, ಭಾರತದಲ್ಲಿ ಇನ್ನೂ ಬಿಡುಗಡೆಯಾಗಬೇಕಾದ ಪುಸ್ತಕವನ್ನು ನಿಷೇಧಿಸುವ ಪ್ರಸ್ತಾಪವನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. id="toptextpromo">"ಅಭಿವ್ಯಕ್ತಿ
ಸ್ವಾತಂತ್ರದ ಪರವಾಗಿದ್ದ ಮಹಾತ್ಮ ಸ್ಮರಣೆಗೆ ಪುಸ್ತಕವನ್ನು ನಿಷೇಧಿಸುವುದು ಪುಸ್ತಕ ದಲ್ಲಿ ಬರೆದ ಅಂಶಗಳಿಗಿಂತ ಹೆಚ್ಚಿನ ಅಪಚಾರ" ಎಂದು ತುಷಾರ್ ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾರೆ. ಪುಸ್ತಕವನ್ನು ನಿಷೇಧಿಸಲಾಗುವುದೆಂದು ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ಹೇಳುವ ಮೂಲಕ, ತಾನೇ ಹುಟ್ಟುಹಾಕಿದ ನಿಷೇಧ ಸಂಸ್ಕೃತಿಯ ದಾರಿಯಲ್ಲಿ ಸಾಗಿದೆ ಎಂಬ ಟೀಕೆ ಪ್ರಜ್ಞಾವಂತರ ವಲಯದಲ್ಲಿ ವ್ಯಕ್ತವಾಗಿದೆ. "ಸರಕಾರ ನಿಷೇಧ ವಿಧಿಸಿದರೆ ನಾನು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ" ಎಂದು ತುಷಾರ್ ಸಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾನು
ನಿಷೇಧ ಸಂಸ್ಕೃತಿಗೆ ವಿರೋಧವಾಗಿರುವುದಾಗಿ ಹೇಳಿರುವ ತುಷಾರ್, ಮಹಾತ್ಮಾ ಗಾಂಧಿ, ಸಲಿಂಗ ಕಾಮಿಯೋ ಅಥವಾ ಮತ್ತೊಂದೋ ಆಗಿದ್ದರೆನ್ನುವ ಉಲ್ಲೇಖದಿಂದ ಏನು ಆಗಬೇಕಾಗಿದೆ ? ಏನೇ ಆದರೂ, ಮಹಾತ್ಮಾ ಗಾಂಧೀ, ಮಾಚ್ 24ರಂದು ತನ್ನ ಪ್ರಥಮ ವರ್ಷಾಚರಣೆಯನ್ನು ಪೂರೈಸಿದೆ. ಭಾರತವನ್ನು ಸ್ವಾತಂತ್ರ ದೆಡೆಗೆ ಮುನ್ನೆಡೆಸಿದವರು ಎನ್ನುವುದನ್ನು ಬಚ್ಚಿಡಲಾಗುವುದಿಲ್ಲವಲ್ಲ ?" ಎಂದು ತುಷಾರ್ ಗಾಂಧೀ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.











Click it and Unblock the Notifications