ಶಾರುಖ್ ಬರದಿದ್ರೆ ಕತ್ತೆ ಬಾಲ ಕುದ್ರೆ ಜುಟ್ಟು
ಮೊಹಾಲಿ, ಮಾ. 30: ಬಾಲಿವುಡ್ಗೇ ಬಾಲಿವುಡ್ಡೇ ಮೊಹಾಲಿ ಅಂಗಳದಲ್ಲಿ ಮನೆ ಮಾಡಿ ಟೀಂ ಇಂಡಿಯಾ ಪರ ಕೂಗುತ್ತಾ ಸಂಭ್ರಮಿಸುತ್ತಿದೆ. ಮೀಸೆ ಹೊತ್ತ ಅಮೀರ್ ಖಾನ್ ಮೊಹಾಲಿ ಪೆವಿಲಿಯನ್ ನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಯಾವ ಸಿನಿಮಾ ಕಾರ್ಯಕ್ರಮಕ್ಕೂ ಹಾಜರಾಗದ ಈ ಚತುರ ನಟ, ಕ್ರಿಕೆಟ್ ಗಾಗಿ ಕೆಲಸ ಕಾರ್ಯ ಬಿಟ್ಟು ಭಾರತವನ್ನು ಬೆಂಬಲಿಸಲು ಓಡೋಡಿ ಬಂದಿದ್ದಾರೆ. ಆದರೆ, ಕಿಂಗ್ ಖಾನ್ ಶಾರುಖ್ ಗೆ ಮಾತ್ರ ಮೊಹಾಲಿಗೆ ಬರಲು ಮನಸ್ಸಿಲ್ಲ. ಕಾರಣ, ಬಾಲಿವುಡ್ ಬಾದ್ ಷಹಗೆ ಮೊಹಾಲಿಗೆ ಬರಲು ಪ್ರಾಣಭಯವಂತೆ.
ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್ ಪಂದ್ಯಕ್ಕೆ ಅಭೂತಪೂರ್ಣ ಭದ್ರತಾ ವ್ಯವಸ್ಥೆ ಒದಗಿಸಿರುವ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮುಖಕ್ಕೆ ಹೊಡೆದಂತ್ತಾಗಿದೆ ಶಾರುಖ್ ನಿರ್ಣಯ. ಗಣ್ಯಾತಿಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಬಾಲಿವುಡ್ ನ ಅಮೀರ್ ಖಾನ್, ನಿರ್ದೇಶಕಿ ಕಿರಣ್ ರಾವ್, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ರಾಹುಲ್ ಬೋಸ್, ಮಿಕಾ ಸಿಂಗ್ ಇಲ್ಲದ ಭಯ ಶಾರುಖ್ ಗೆ ಯಾಕೆ?
ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್
ಪ್ರೀತಿ ಜಿಂಟಾಗೇನೂ ಪಾಪ ಟಿಕೆಟ್ ಸಿಕ್ಕಿರಲಿಲ್ಲವಂತೆ ಆದರೂ, ವಿಐಪಿ ಪಾಸ್ ಮೂಲಕ ಎಂಟ್ರಿ ಕೊಟ್ಟ ಪಂಜಾಬಿ ಕುವರಿ ಕೇಸರಿ, ಬಿಳಿ, ಹಸಿರು ಬಳೆತೊಟ್ಟು ಪೆವಿಲಿಯನ್ ನಲ್ಲಿ ರಂಗೇರಿಸಿದರು. , ಅಕ್ಷಯ್ ಕುಮಾರ್, ಇಮ್ರಾನ್ ಖಾನ್, ಸಲ್ಮಾನ್ ಸೇರಿದಂತೆ ಹಲವಾರು ಮುಂಚಿತವಾಗಿ ಗೈರು ಹಾಜರಾಗುವುದಾಗಿ ಹೇಳಿದ್ದಾರೆ. ಆದರೆ, ಮೊಹಾಲಿಗೆ ಬರುವುದಾಗಿ ಹೇಳುತ್ತಿದ್ದ ಶಾರುಖ್, ಕೊನೆ ಕ್ಷಣದಲ್ಲಿ ತಮ್ಮ ನಿರ್ಣಯವನ್ನು ಬದಲಾಯಿಸಿದ್ದಾರೆ. ತಮ್ಮ ಐಷಾರಾಮಿ ನಿವಾಸ ಮನ್ನತ್ ನಲ್ಲಿ ಬಾಲಿವುಡ್ ಗೆಳೆಯರೊಡನೆ ವಿಶ್ವಕಪ್ ಸಂಭ್ರಮ ಆಚರಿಸುವುದಾಗಿ ಹೇಳಿದ್ದಾರೆ.
ಎನ್‌ಎಸ್‌ಜಿ ಕಮಾಂಡೋಗಳ ಜತೆಗೆ 2200ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಸುಪರ್ದಿಯಲ್ಲಿರುವ ಮೊಹಾಲಿ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಹಾಗೂ ಹೀಗೂ ಉತ್ತಮ ಆರಂಭ ಪಡೆದಿದ್ದು, ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಭಾರತ ಪಂದ್ಯ ನೋಡಲು ಬಾರದ ಶಾರುಖ್, ಇನ್ನು ವಾರಗಳ ನಂತರ ತನ್ನ ತಂಡ ಕೆಕೆಆರ್ ಪರ ಕುಣಿಯುವುದನ್ನು ಕಾಣಲು ಮರೆಯಬೇಡಿ[












Click it and Unblock the Notifications