ಭಾರತದ ವಿರುದ್ಧ ಶೋಯೆಬ್ ಆಡುವುದು ಖಚಿತ

ಕರಾಚಿ, ಮಾ. 29: ಭಾರತ ಮತ್ತು ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅನುಭವಿ ಬೌಲರ್ ಶೋಯೆಬ್ ಅಖ್ತರ್ ಆಡುವುದು ಖಚಿತ ಎಂದು ತಂಡದ ಮ್ಯಾನೇಜರ್ ಇಂತಿಕಾಬ್ ಅಲಂ ಸ್ಪಷ್ಟಪಡಿಸಿದ್ದಾರೆ. ಫಿಟ್ ನೆಸ್ ಸಮಸ್ಯೆ ಎದುರಿಸುತ್ತಿರುವ ಅಖ್ತರ್ ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಆದರೆ ಭಾರತ ತಂಡಕ್ಕೆ ಅಖ್ತರ್ ಸಮಸ್ಯೆಯೇನೂ ಅಲ್ಲ. ಅವರನ್ನು ಸದೆಬಡಿಯುವುದು ಹೇಗೆ ಎಂಬುದು ಸಚಿನ್, ಸೆಹವಾಗ್, ಯುವ್ವಿಗೆ ಚೆನ್ನಾಗಿ ಗೊತ್ತು.

ಶೋಯೆಬ್ ಸಮರಾಭ್ಯಾಸದಲ್ಲಿ ನಿರತರಾಗಿದ್ದಾರೆ. ತಂಡಕ್ಕೆ ಅವರು ಆಯ್ಕೆಯಾಗುವುದು ಖಚಿತ ಮತ್ತು ಉಚಿತ. ಬಹುಮುಖ್ಯವಾದ ಪಂದ್ಯದಲ್ಲಿ ಆಡಲು ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸಮರ್ಥರಾಗಿದ್ದಾರೆ. ಉತ್ತಮ ಬೌಲಿಂಗ್ ಸಹ ಮಾಡುತ್ತಿದ್ದಾರೆ. ಸೆಮೀಸ್ ಗೆ ಅವರು ರೆಡಿ ಎಂದು ಇಂತಿಕಾಬ್ ಘೋಷಿಸಿದ್ದಾರೆ.

ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

'ಶೋಯೆಬ್ ಕ್ರಿಕೆಟ್ ನತ್ತ ಗಮನಹರಿಸುತ್ತಿಲ್ಲ. ನಿವೃತ್ತಿಗೆ ದಿನ ಎಣಿಸುತ್ತಿದ್ದಾರೆ ಎಂಬುದೆಲ್ಲ ಶುದ್ಧ ಗಾಳಿಸುದ್ದಿ. ಅವರು ಕಠಿಣ ತರಬೇತಿಯಲ್ಲಿದ್ದಾರೆ. ಪಂದ್ಯಾವಳಿಯುದ್ದಕ್ಕೂ ತಂಡದ ಸಹ ಆಟಗಾರರ ಜತೆ ಸಮತೋಲದಲ್ಲಿದ್ದಾರೆ. ತಂಡದ ನಾಯಕ ಶಹೀದ್ ಅಫ್ರಿದಿ ಸಹ ಶೋಯೆಬ್ ಆಡಬೇಕೆಂದಿದ್ದಾರೆ' ಎಂದ ಇಂತಿಕಾಬ್, ಮೊಣಕಾಲು ಗಾಯ ಅವರನ್ನು ಸ್ವಲ್ಪ ಬಾಧಿಸುತ್ತಿದೆ ಎಂದು ಹೇಳಲು ಮರೆಯಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+