ಸತ್ಯಸಾಯಿ ಬಾಬಾ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಪುಟ್ಟಪರ್ತಿ,
ಮಾ. 29: ಸತ್ಯ ಸಾಯಿ ಬಾಬಾ (85) ಅವರು ಅನಾರೋಗ್ಯದಿಂದಾಗಿ ಸೋಮವಾರ ಸಂಜೆ ಶ್ರೀ ಸತ್ಯಸಾಯಿ ಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಣತ ವೈದ್ಯರು ತಕ್ಷಣ ಅವರ ಚಿಕಿತ್ಸೆಗೆ ಮುಂದಾಗಿದ್ದಾರೆ. ಸಾಯಿಬಾಬಾ ಆರೋಗ್ಯ ಸ್ಥಿತಿ ದೃಢವಾಗಿದೆ. ಆದರೆ ಸದ್ಯಕ್ಕೆ ಬಾಬಾ ಅವರ ದೈನಂದಿನ ದರ್ಶನ ಇರುವುದಿಲ್ಲ ಎಂದು ಶ್ರೀ ಸತ್ಯಸಾಯಿ ಟ್ರಸ್ಟ್ ಮುಖ್ಯಸ್ಥ ಆರ್.ಜೆ. ರತ್ನಾಕರ್ ತಿಳಿಸಿದ್ದಾರೆ. id="toptextpromo">ಅನಂತಪುರ
ಜಿಲ್ಲೆಯ ಪುಟ್ಟಪರ್ತಿಯಲ್ಲಿರುವ ಪ್ರಶಾಂತ ನಿಲಯದಲ್ಲಿರುವ ಸಾಯಿಬಾಬಾ ಆರೋಗ್ಯ ಸೋಮವಾರ ಮಧ್ಯಾಹ್ನ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಟ್ರಸ್ಟ್ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಸಂಜೆ 8 ಗಂಟೆವರೆಗೆ ವೈದ್ಯರು ಅವರಿಗೆ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಿದರು. ಉಸಿರಾಟದ ತೊಂದರೆಯಿಂದಾಗಿ ಅವರಿಗೆ ಪೇಸ್ ಮೇಕರ್ ಅಳವಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>ಕೆಲವು
ದಿನಗಳಿಂದ ನಿಮೋನಿಯಾ ಮತ್ತು ಶ್ವಾಸಕೋಶ ಬಾಧೆಯಿಂದ ಬಳಲುತ್ತಿದ್ದರು. ಶ್ವಾಸಕೋಶ ಸೋಂಕು ತೀವ್ರವಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಈಗ ಚೇತರಿಸಿಕೊಳ್ಳುತ್ತಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ರತ್ನಾಕರ್ ಹೇಳಿದ್ದಾರೆ. ಕಳೆದ ನವೆಂಬರ್-ನಲ್ಲಿ ತಮ್ಮ 85ನೇ ಜನ್ಮದಿನ ಆಚರಿಸಿಕೊಂಡಿದ್ದ ಸಾಯಿಬಾಬಾ ಆಗಲೇ ತುಂಬ ಬಳಲಿದಂತೆ ಕಂಡುಬಂದಿದ್ದರು.











Click it and Unblock the Notifications