ಯಡಿಯೂರಪ್ಪ ಎಫ್ಐಆರ್ ನಿಂದ ಬಚಾವ್
ಬೆಂಗಳೂರು,
ಮಾ. 28: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಭೂಹಗರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ವರದಿ (ಎಫ್ ಐಆರ್) ದಾಖಲಿಸದಿರಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಯಡಿಯೂರಪ್ಪ, ಅವರ ಕುಟುಂಬದವರು ಮತ್ತು ಗೃಗಹ ಸಚಿವ ಆರ್. ಅಶೋಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಸಂಬಂಧ ಕಾನೂನು ತಜ್ಞರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ಲೋಕಾಯುಕ್ತ ಎಡಿಜಿಪಿ ಆರ್.ಕೆ. ದತ್ತಾ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ಅವರು ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. id="toptextpromo">ಭೂಹಗರಣದ
ದೂರನ್ನು ವಿಶೇಷ ನ್ಯಾಯಾಲಯ ಈಗಾಗಲೇ ವಿಚಾರಣೆಗೆ (ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು) ಪರಿಗಣಿಸಿದೆ. ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವುದು ನ್ಯಾಯಾಲಯಕ್ಕೆ ನೀಡಲೆಂದು. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯವೇ ದೂರನ್ನು ಪರಿಗಣಿಸಿ ಹೆಚ್ಚಿನ ಮಾಹಿತಿಗಾಗಿ ವಿಚಾರಣೆಗೆ ಆದೇಶಿಸಿರುವುದರಿಂದ ಎಫ್ಐಆರ್ ಅಗತ್ಯ ಇಲ್ಲ ಎಂದು ತರ್ಕಿಸಲಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಭೂಹಗರಣದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಮೇ 4ರೊಳಗಾಗಿ ವರದಿ ಸಲ್ಲಿಸಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ಹೋಗಲಿ
ಅವರಿಗೆ ಸಮನ್ಸ್ ಆದರೂ ನೀಡಬಹುದೇ? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ 'ಇಲ್ಲ' ಎಂದೇ ಹೇಳಬಹುದು. ಕೇವಲ ನೋಟಿಸ್ ಜಾರಿ ಮಾಡಿ ವಿಚಾರಣೆ ಕೇಳಬಹುದಷ್ಟೇ. ಜತೆಗೆ, ವಿಶೇಷ ನ್ಯಾಯಾಲಯ ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ ನಿಯಮ 202 (1) ಅನುಸಾರ ಅಪರಾಧ ಸಂಖ್ಯೆ ದಾಖಲಿಸಬಹುದಾಗಿದೆ ಅಷ್ಟೆ.











Click it and Unblock the Notifications