ಗೊಂದಿಬಸವನಹಳ್ಳಿಯಲ್ಲಿ ನಿಲ್ಲದ ಕಲ್ಲುಕೋರೆ ಸದ್ದು

ಸ್ಪೋಟಕಗಳ ಸದ್ದಿಗೆ ಭೂಮಿ ಕಂಪಿಸುತ್ತಿರುವುದರಿಂದ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಮಧ್ಯೆ ಕಲ್ಲುಕೋರೆಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಮನೆಗಳಿಗೆ ಹಾಗೂ ಪರಿಸರಕ್ಕೆ ಹಾನಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಇದೇ ಗ್ರಾಮದಲ್ಲಿ ಕಲ್ಲುಕೋರೆಯಲ್ಲಿ ಬರೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತರಾಗಿದ್ದರು. ಆದರೂ, ಕಲ್ಲುಕೋರೆ ಸ್ಫೋಟ ಇನ್ನೂ ಅವ್ಯಾಹತವಾಗಿ ಮುಂದುವರಿದುಕೊಂಡೇ ಬಂದಿದೆ.
ಉದ್ಯಮಿ ದಿನೇಶ್ ಎಂಬುವವರಿಗೆ ಸೇರಿದ ಕಲ್ಲುಕೋರೆ ಇದಾಗಿದ್ದು, ಕಲ್ಲು ತೆಗೆಯಲು ಸಿಡಿಸಿದ ಸ್ಫೋಟಕದಿಂದ ಅಪಾರ ಪ್ರಮಾಣದ ಕಲ್ಲುಗಳು ಸಿಡಿದು ಅಲ್ಲಲ್ಲಿ ಬಿದ್ದಿವೆ. ಒಂದು ಕಲ್ಲು ಹಸುವಿನ ಮೇಲೆ ಬಿದ್ದ ಪರಿಣಾಮ ಹಸುವಿನ ಕೊಂಬು ಮುರಿದು ಗಾಯಗೊಂಡಿದೆ. ಸುತ್ತಮುತ್ತಲ ನಿವಾಸಿಗಳ ಮನೆ ಮೇಲೆ ಬಿದ್ದು ಹಂಚುಗಳು ಒಡೆದಿವೆ. ನಿರಂತರವಾಗಿ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಮರಗಳು ಕೂಡ ಸಾವನ್ನಪ್ಪುತ್ತಿವೆ.
ಕಾನೂನನ್ನು ಉಲ್ಲಂಘಿಸಿ ಕಲ್ಲುಕೋರೆಯಲ್ಲಿ ಸ್ಫೋಟಕ ಸಿಡಿಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಗ್ರಾಮಸ್ಥರು ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಲ್ಲುಕೋರೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನೆಯನ್ನು ನಡೆಸಿದ್ದಾರೆ.












Click it and Unblock the Notifications