ಚೊಚ್ಚಲ ಶತಕ ವೀರ, ವಿಶ್ವಕಪ್‌ನಲ್ಲಿ ಯುವಿ ಶೂರ

ಚೆನ್ನೈ, ಮಾ.21: ಆಲ್‌ರೌಂಡರ್ ಆಡ ಪ್ರದರ್ಶಿಸಿದ ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ 'ಬಿ" ಗುಂಪಿನ ಕೊನೆಯ ಪಂದ್ಯ ಗೆಲ್ಲಲು ಕಾರಣರಾದರು. ವಿಶ್ವಕಪ್‌ನಲ್ಲಿ ತನ್ನ ಚೊಚ್ಚಲ ಶತಕ ದಾಖಲಿಸಿಕೊಂಡ ಯುವಿ, ಸದ್ಯಕ್ಕೆ ಭಾರತದ ಪಾಲಿನ ಆಶಾಕಿರಣ. ವಿಶ್ವಕಪ್ ನಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಮಿಂಚುತ್ತಿರುವ ಯುವರಾಜ್ ಮುಂದಿನ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಮುಖ ಅಸ್ತ್ರವಾಗಲಿದ್ದಾರೆ.

ದಾಖಲೆಯ 450ನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ನೂರನೇ ಶತಕಕ್ಕಾಗಿ ಎಲ್ಲರೂ ಕಾದು ಕೂತಿದ್ದರು. ಸಚಿನ್ ಎರಡು ರನ್ ಗಳಿಸಿ ವಿಂಡೀಸ್ ವೇಗಿ ರವಿ ರಾಮ್ ಪಾಲ್ ಗೆ ಚೊಚ್ಚಲ ವಿಶ್ವಕಪ್ ವಿಕೆಟ್ ಒಪ್ಪಿಸಿ, ಅಂಪೈರ್ ತೀರ್ಪಿಗೆ ಕಾಯದೆ ಪೆವಿಲಿಯನ್ ಹಾದಿ ಹಿಡಿದರು. ಈ ಮೂಲಕ ಕ್ರೀಡಾ ಮನೋಭಾವ ಮೆರೆದರು. [ಪಂದ್ಯದ ಫಲಿತಾಂಶ: ಸ್ಕೋರ್ ಕಾರ್ಡ್]

ಶತಕ ವೀರ : ಯುವರಾಜ್ ಸಿಂಗ್ 113 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದರು. ಇದು ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್‌ರ ಮೊದಲ ಶತಕವಾಗಿದೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13ನೆ ಏಕದಿನ ಶತಕ. 41ನೆ ಓವರ್‌ನಲ್ಲಿ ಕಿರೊನ್ ಪೊಲಾರ್ಡ್‌ರ 4ನೆ ಎಸೆತದಲ್ಲಿ ಚೆಂಡನ್ನು ಲಾಂಗ್‌ಆಫ್ ಕಡೆ ತಳ್ಳಿ 1 ರನ್ ಗಳಿಸುವ ಮೂಲಕ ಶತಕ ಪೂರೈಸಿದರು.

ಕಿರೊನ್ ಪೊಲಾರ್ಡ್ ಎಸೆದ 45ನೆ ಓವರ್‌ನ ಕೊನೆಯ ಎಸೆತದಲ್ಲಿ ಯುವರಾಜ್ ಸಿಂಗ್ ಭರ್ಜರಿ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ನೇರವಾಗಿ ಪೊಲಾರ್ಡ್ ಕೈ ಸೇರಿತು. ಪರಿಣಾಮವಾಗಿ ಯುವರಾಜ್ ಸಿಂಗ್‌ರ 163 ನಿಮಿಷಗಳ ಆಟಕ್ಕೆ ತೆರೆ ಬಿತ್ತು. ಮುಂಚೆ ಎಲ್ಲಾ ಯುವರಾಜ್ ಸಿಂಗ್ ಎಂದರೆ ಅರ್ಧ ಶತಕ ನಂತರ ಪೆವಿಲಿಯನ್ ಹಾದಿ ಎನ್ನಲಾಗುತ್ತಿತ್ತು. ಆದರೆ, ಈ ಟೂರ್ನಿಯಲ್ಲಿ ಹೆಚ್ಚಿನ ಪ್ರಬುದ್ಧತೆಯಿಂದ ಆಡುತ್ತಿದ್ದಾರೆ. ಈಗ ಭಾರತದ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಸತ್ವ ಕಂಡುಬರುತ್ತಿದೆ.

271 ಏಕದಿನ ಪಂದ್ಯಗಳಿಂದ 87.63 ಸ್ಟೈಕ್ ರೇಟ್ ನಂತೆ 7972 ರನ್ ಗಳಿಸಿರುವ ಯುವರಾಜ್ ಈವರೆಗೂ ಸುಮಾರು 817 ಬೌಂಡರಿಗಳು ಹಾಗೂ 144 ಸಿಕ್ಸರ್ ಸಿಡಿಸಿದ್ದಾರೆ. ಬೌಲಿಂಗ್ ನಲ್ಲೂ ಮಿಂಚುತ್ತಿದ್ದು 103 ವಿಕೆಟ್ ಗಳನ್ನು ಪಡೆದಿದ್ದಾರೆ. ಯುವರಾಜ್ ಕೊನೆ ಬಾರಿ ಶತಕ ಸಿಡಿಸಿದ್ದು 2009ರಲ್ಲಿ ಹಾಗಾಗಿ 35 ಇನ್ನಿಂಗ್ಸ್ ನಂತರ ಶತಕ ಗಳಿಸಿರುವುದು ಉತ್ತಮ ಬೆಳವಣಿಗೆ. ಸದ್ಯ ಈ ವಿಶ್ವಕಪ್ ನಲ್ಲಿ 284 ರನ್ ಗಳಿಸಿರುವ ಯುವರಾಜ್, ಟಾಪ್ 10 ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಮೇಲಕ್ಕೇರಬೇಕಿದೆ. ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಆಟ ಪ್ರಮುಖ ಪಾತ್ರ ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+