ಪ್ರಾಜೆಕ್ಟ್ ನಿರತ ಎಂಜಿನಿಯರಿಂಗ್ ವಿದ್ಯಾರ್ಥಿ ಕೆರೆಗೆಹಾರ
ಹಾಸನ,
ಮಾ. 21: ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಬಿಇ ವಿದ್ಯಾರ್ಥಿ ಸಿ.ಡಿ. ಮಲ್ಲಿಕಾರ್ಜುನ ಕುಶಾಲನಗರ ಬಳಿ ನೀರಿನ ಕಾಲುವೆಗೆ ಜಾರಿ ಬಿದ್ದು, ಮೃತಪಟ್ಟಿದ್ದಾನೆ. 22 ವರ್ಷದ ಮಲ್ಲಿಕಾರ್ಜುನ ಮೂವರು ಸಹಪಾಠಿಗಳ ಜತೆಗೂಡಿ ನೀರಿನ ಕಾಲುವೆ ಬಳಿ ಪ್ರಾಜೆಕ್ಟ್ ವರ್ಕ್-ನಲ್ಲಿ ನಿರತನಾಗಿದ್ದಾಗ ಮಾರ್ಚ್ 19 ರಂದು ಈ ದುರ್ಘಟನೆ ನಡೆದಿದೆ. id="toptextpromo">ದಿನಪತ್ರಿಕೆಗಳ
ವಿತರಕ ಚಿಕ್ಕಮಗಳೂರು ಜಿಲ್ಲೆಯ ಚೌಳಹಿರಿಯೂರಿನ ದೇವೀರಪ್ಪ ಅವರ ಹಿರಿಯ ಪುತ್ರ. ಪ್ರಾಜೆಕ್ಟ್ ವರದಿಗೆಂದು ಸಹಪಾಠಿಗಳೊಂದಿಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಮಲ್ಲಿಕಾರ್ಜುನ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಬಡ ಕುಟುಂಬದ ದೇವೀರಪ್ಪ ಹಣಕಾಸು ತಾಪತ್ರಯದ ನಡುವೆಯೂ ತಮ್ಮ ಇಬ್ಬರು ಮಕ್ಕಳಿಗೆ ಎಂಜಿನಿಯರಿಂಗ್ ಶಿಕ್ಷಣ ಕಲ್ಪಿಸಿದ್ದರು. ಕಿರಿಯ ಪುತ್ರ ಸೋಮೇಶ್ ಬೆಂಗಳೂರು ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಮಲ್ಲಿಕಾರ್ಜುನನ
ಶವವನ್ನು ಭಾನುವಾರ ಕಾಲುವೆಯಿಂದ ಹೊರತೆಗೆಯಲಾಯಿತು. ಶವವನ್ನು ಕಾಲೇಜಿನಲ್ಲಿಡಲಾಗಿತ್ತು. ಸಹಪಾಠಿಗಳು, ಕಾಲೇಜು ಸಿಬ್ಬಂದಿ ಮೃತನ ಅಂತಿಮ ದರ್ಶನ ಪಡೆದರು. ಮಲ್ಲಿಕಾರ್ಜುನನ ಹುಟ್ಟೂರಾದ ಚೌಳಹಿರಿಯೂರಿನಲ್ಲಿ ಭಾನುವಾರ ಸಂಜೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.











Click it and Unblock the Notifications