ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಆಸ್ತಿ: ಕೊನೆಗೂ ಹಕ್ಕು ಸ್ಥಾಪನೆ

By Srinath
|
Google Oneindia Kannada News

Dawood Ibrahim, Delhi Shiv Sainik
ಮುಂಬೈ, ಮಾ. 21: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಬೇನಾಮಿ ಆಸ್ತಿಯ ಮೇಲೆ ದೆಹಲಿ ಶಿವ ಸೇನೆಯ ನೇತಾರ ಅಜಯ್ ಶ್ರೀವಾಸ್ತವ ತಮ್ಮ ಹಕ್ಕು ಸ್ಥಾಪಿಸಿದ್ದಾರೆ. ಸುಮಾರು 10 ವರ್ಷಗಳ ಕಾನೂನು ಸಮರದ ಬಳಿಕ ಇಲ್ಲಿನ ನಾಗಪಾಡಾದಲ್ಲಿ ಸುಮಾರು ಒಂದು ಕೋಟಿ ರುಪಾಯಿ ಮೌಲ್ಯದ 350 ಚದರ ಅಡಿ ವಾಣಿಜ್ಯ ಸಂಕೀರ್ಣವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಈ ಬೇನಾಮಿ ಆಸ್ತಿ ವಾಣಿಜ್ಯ ಸಂಕೀರ್ಣವಾಗಿದ್ದು, ಪಾತಕಿ ದಾವೂದ್ 1980ರ ದಶಕದಲ್ಲಿ ತನ್ನ ಭೂಗತ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸುತ್ತಿದ್ದ. ಪ್ರಸ್ತುತ ಈ ಆಸ್ತಿ ದಾವೂದ್-ನ ಸೋದರಿ ಹಸೀನಾ ಪಾರ್ಕರ್ ಹಿಡಿತದಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಅದನ್ನು ಶ್ರೀವಾಸ್ತವ ಅವರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಕಳೆದ ವಾರ ಸೂಚಿಸಿದೆ. ಒಂದು ವೇಳೆ ಹಸೀನಾ ಆಸ್ತಿಯನ್ನು ಪರಭಾರೆ ಮಾಡಲು ಒಪ್ಪದಿದ್ದಲ್ಲಿ ಶ್ರೀವಾಸ್ತವ ಅವರು ಪೊಲೀಸರ ನೆರವಿನೊಂದಿಗೆ ಬಲವಂತದಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿದೆ. ಶ್ರೀವಾಸ್ತವ ಕಾನೂನು ಪ್ರಕ್ರಿಯೆಗಾಗಿ ಖರ್ಚು ಮಾಡಿರುವ ಹಣವನ್ನೂ ಪಾವತಿಸುವಂತೆ ಹಸೀನಾಗೆ ತಿಳಿಸಲಾಗಿದೆ.

1996ರಲ್ಲಿ ದಾವೂದ್-ನಿಂದ ಇಲಾಖೆಗೆ 40.31 ಕೋಟಿ ರು. ತೆರಿಗೆ ಬರಬೇಕಿತ್ತು. ಇಲಾಖೆ ನೀಡುತ್ತಿದ್ದ ಯಾವುದೇ ನೋಟಿಸ್-ಗೆ ಪಾತಕಿ ಕ್ಯಾರೆ ಎನ್ನುತ್ತಿರಲಿಲ್ಲ. ಆಗ ಇಲಾಖೆ ಅನಿವಾರ್ಯವಾಗಿ 11 ಕಡೆಗಳಲ್ಲಿ ದಾವೂದ್-ಗೆ ಸೇರಿದ ಆಸ್ತಿಯನ್ನು ಜಫ್ತಿ ಮಾಡಿತು. 2011ರಲ್ಲಿ ಆ ಆಸ್ತಿಗಳನ್ನೆಲ್ಲ ಒಂದೊಂದಾಗಿ ಹರಾಜಿಗಿಟ್ಟಿತು. ನಾಗಪಾಡದಲ್ಲಿರುವ ವಾಣಿಜ್ಯ ಸಂಕೀರ್ಣವನ್ನು ಶ್ರೀವಾಸ್ತವ ಧೈರ್ಯವಾಗಿ ಖರೀದಿಸಿದ್ದರು. ಆದರೆ ದಾವೂದ್-ನ ಆಣತಿಯಂತೆ ಛೋಟಾ ಶಕೀಲ್ ನಿರಂತವಾಗಿ ಶ್ರೀವಾಸ್ತವಗೆ ಬೆದರಿಕೆಯೊಡ್ಡಿದ್ದ.

ಶ್ರೀವಾಸ್ತವ 2.5 ಲಕ್ಷ ಖಾತರಿ ಹಣ ನೀಡಿ ನಾಗಪಾಡ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದರು. ಇಲಾಖೆಯೂ ಇದಕ್ಕೆ ಅಂಕಿತ ಹಾಕಿತು. ಅದಕ್ಕೂ ಮುನ್ನ, ಒಂದು ಹಂತದಲ್ಲಿ ಶ್ರೀವಾಸ್ತವ ಅವರು ದಾವೂದ್ ಮನುಷ್ಯ ಎಂದು ಇಲಾಖೆಯೂ ಸಂದೇಹ ವ್ಯಕ್ತಪಡಿಸಿತ್ತು. ಆದರೆ ಹಸೀನಾ ವಾಣಿಜ್ಯ ಸಂಕೀರ್ಣದ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿದ್ದಳು. ದಾವೂದ್-ಗೂ ಈ ಆಸ್ತಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ತನಗೆ ಆಸ್ತಿ ಎಂದು ನ್ಯಾಯಾಲಯದಲ್ಲಿ 2004ರಲ್ಲಿ ದಾವೆ ಹೂಡಿದ್ದಳು. ಆಗ ಶ್ರೀವಾಸ್ತವ ದಾವೂದ್ ಕಡೆಯ ಮನುಷ್ಯ ಅಲ್ಲ ಎಂಬುದು ಖಾತ್ರಿಯಾಯಿತು. ಇದೀಗ ಶ್ರೀವಾಸ್ತವ ಅವರಿಗೆ ಆಸ್ತಿ ಪರಭಾರೆಯಾಗಲಿದೆ ಎಂದು ಇಲಾಖೆ ಹೇಳಿದೆ.

English summary
Ajay Srivastav, a Delhi-based Shiv Sainik, has won 10 years long legal battle over a 350-square-foot benami property in Nagpada belonging to underworld don Dawood Ibrahim and auctioned by the income-tax (I-T) department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X