ಜಾತ್ರೆಯಲ್ಲಿ ಬುದ್ಧಿಮಾಂದ್ಯ ಬಾಲಕಿ ಅತ್ಯಾಚಾರ
ಕಾಸರಗೋಡು,
ಮಾ.21: ಅಡೂರು ಮಹಾಲಿಂಗೇಶ್ವರ ಕ್ಷೇತ್ರ ಜಾತ್ರೆಗೆ ಬಂದಿದ್ದ 13 ವರ್ಷದ ಬುದ್ದಿಮಾಂದ್ಯ ಅಮಾಯಕ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಹೀನ ಪ್ರಕರಣ ಬೆಳಕಿಗೆ ಬಂದಿದೆ. ಜಾತ್ರೆಯಲ್ಲಿ ಬೆಲೂನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಈ ಸಂಬಂಧ ಆರೋಪಿಗಳೆಂದು ಪರಿಗಣಿಸಿ ಆಡೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. id="toptextpromo">ಅಡೂರು
ಮಹಾಲಿಂಗೇಶ್ವರ ಕ್ಷೇತ್ರದ ಉತ್ಸವದ ಅಂಗವಾಗಿ ಗದ್ದೆಯಲ್ಲಿ ನಡೆದಿದ್ದ ಸಂತೆ ನೋಡಲೆಂದು ಈಕೆ ತಾಯಿಯೊಂದಿಗೆ ಬಂದಿದ್ದಳು. ತಾಯಿ ದೂರವಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಬೆಲೂನ್ ಮಾರಾಟ ನಡೆಸುತ್ತಿದ್ದ ಆರೋಪಿಗಳು ಪುಸಲಾಯಿಸಿ, ಸಿಹಿತಿಂಡಿ ನೀಡಿದ್ದಾರೆ. ಬಳಿಕ ಸ್ವಲ್ಪ ದೂರದಲ್ಲಿರುವ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರಗೈದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮನೆಗೆ
ತಲಪಿದ ಬಾಲಕಿ ಅಸ್ವಸ್ಥಳಾಗಿ ನೋವಿನಿಂದ ಬಳಲುವುದನ್ನು ಕಂಡು ಸಂಶಯಗೊಂಡ ತಾಯಿ ಪ್ರಶ್ನಿಸಿದಾಗ ಅತ್ಯಾಚಾರದ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಬಾಲಕಿಯನ್ನು ನಗರದ ಕಾಸರಗೋಡಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಅತ್ಯಾಚಾರ ನಡೆದುವುದನ್ನು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ಆಲಂಪಾಡಿ, ಪಾಣಲಂ ಪ್ರದೇಶಕ್ಕೆ ಸೇರಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications