ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಎಲ್ಲಾ ಓಕೆ : ಯಡ್ಡಿ

ಆದರೆ, ಸುಮಾರು ಸಚಿವರು, ಶಾಸಕರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನ ಬಿಜೆಪಿ ನಾಯಕರು ನೇರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದರಿಂದ ಮತ್ತೆ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿರುವುದನ್ನು ಯಡಿಯೂರಪ್ಪ ಅಲ್ಲಗೆಳೆದಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನೇರವಾಗಿ ಗೆಲ್ಲಲು ಸಾಧ್ಯವಾಗದ ಪ್ರತಿಪಕ್ಷಗಳು ಬಿಜೆಪಿಯಲ್ಲಿ ಭಿನ್ನಮತ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಸಿಎಂ ಸರ್ವಾಧಿಕಾರಿ ಧೋರಣೆಗೆ ಖಂಡನೆ: ಈಶ್ವರಪ್ಪನವರ ನೇತೃತ್ವದಲ್ಲಿ ಅನಂತ ಕುಮಾರ್ ಮತ್ತಿತರರು ಬುಧವಾರ ರಾತ್ರಿ ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಸಚಿವರು ಹಾಗೂ ಶಾಸಕರು ಭಾಗವಹಿಸಿ, ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಯಡಿಯೂರಪ್ಪ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯುಂಟಾಗುತ್ತಿದೆ. ಅಲ್ಲದೆ ಅವರ ಮಕ್ಕಳು ಕೂಡಾ ಸರಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಗಾರಿದ್ದರು.
ಗೂಳಿಯಂತೆ ನುಗ್ಗಿದ ಸಿಎಂ: ಸಭೆಗೆ ಆಹ್ವಾನವಿಲ್ಲದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಪ್ತ 15 ಮಂದಿ ಶಾಸಕರೊಂದಿಗೆ ನಗರದ ಬಿಜೆಪಿ ಕಚೇರಿಗೆ ನುಗ್ಗಿದರು. ಸಭೆಯಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಸಭೆಯಲ್ಲಿ ಸೇರಿದ್ದ ಸಚಿವರು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಸಚಿವರು, ಶಾಸಕರು ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದರು. ಯಡಿಯೂರಪ್ಪನವರ ಮಕ್ಕಳಿಬ್ಬರ ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್, ಆದರ್ಶ ಡೆವಲಪರ್ಸ್‌ಗಳಂತಹ ಕಂಪೆನಿ ಯಿಂದ 27.18 ಕೋಟಿ ರೂ. ದೇಣಿಗೆ ರೂಪದಲ್ಲಿ ಸಂದಾಯವಾಗಿರುವುದು ವಿವಾದಕ್ಕೆ ಕಾರಣವಾಗಿದ್ದು ಬಿಜೆಪಿ ನಾಯಕರು ಸಿಎಂ ತಲೆದಂಡವನ್ನು ಬಯಸಿದ್ದಾರೆ.
ಮುಂದಿನ ದಾರಿ: ಬಿ.ಎಸ್. ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಸಹಿ ಸಂಗ್ರಹ ಕಾರ್ಯ ಆರಂಭಿಸಲಾಗಿದೆ. 50 ಮಂದಿ ಬಿಜೆಪಿ ಸಚಿವರು, ನಾಯಕರು, ಶಾಸಕರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಒತ್ತಡಕ್ಕೆ ಮಣಿದು ಯಡಿಯೂರಪ್ಪ ರಾಜೀನಾಮೆ ನೀಡಬಹುದು. ನಾಯಕತ್ವ ಬದಲಾವಣೆ ಮಾಡಿ ಹೊಸ ಸಿಎಂ ನೇಮಕ. ಯಡಿಯೂರಪ್ಪ ಅವರಿಂದ ವಿಧಾನಸಭೆ ವಿಸರ್ಜನೆ ಸಾಧ್ಯತೆ. ಆದರೆ, ಇದು ಯಾವುದೂ ಕೈಗೂಡುವ ಲಕ್ಷಣಗಳಿಲ್ಲ. ಭಿನ್ನಮತೀಯ ಬಿಜೆಪಿ ಶಾಸಕರು ಹಾಗೂ ಸಚಿವರು ಸಾಮೂಹಿಕ ರಾಜಿನಾಮೆ ನೀಡಿ ಯಡಿಯೂರಪ್ಪ ಅವರು ಕೆಳಗಿಳಿಸಿದರೆ ಇಳಿಸಬಹುದು ಅಷ್ಟೇ.












Click it and Unblock the Notifications