ಅಸ್ಟ್ರೇಲಿಯಾ: ಭಾರತದ ವಿದ್ಯಾರ್ಥಿನಿ ರೇಪ್, ಮರ್ಡರ್

ವಿಡಿಯೋ: ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿನಿ ಹತ್ಯೆ
ಮೃತಪಟ್ಟ ಭಾರತೀಯ ವಿದ್ಯಾರ್ಥಿನಿಯನ್ನು ತೋಷಾ ಥಕ್ಕರ್ ಎಂದು ಗುರುತಿಸಲಾಗಿದೆ. ಆದರೆ, ಸಾವನ್ನಪ್ಪಿರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಸ್ಥಳೀಯ ಪೊಲೀಸರು ನೀಡಿಲ್ಲ. ಸಾವಿಗೆ ನಿಜವಾದ ಕಾರಣ ಮರಣೋತ್ತರ ಪರೀಕ್ಷೆಗಳ ನಂತರ ತಿಳಿಯಲಿದೆ. ಮಾರ್ಚ್ 9 ರಂದು ಆಕೆಯನ್ನು ಕೊನೆಯ ಬಾರಿಗೆ ಕಂಡವರಿದ್ದಾರೆ. ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಸೌಥ್ ಕ್ರಾಸ್ ವಿಶ್ವವಿದ್ಯಾಲಯಕ್ಕೆ ವ್ಯಾಪ್ತಿಗೆ ಒಳಪಡುವ ಸಿಡ್ನಿಯ ಕಾಲೇಜಿನಲ್ಲಿ ಬಿಸಿನೆಸ್ ಹಾಗೂ ಐಟಿ ವಿಭಾಗದಲ್ಲಿ ಥಕ್ಕರ್ ವ್ಯಾಸಂಗ ಮಾಡುತ್ತಿದ್ದರು. ಆಸ್ಟ್ರೇಲಿಯಾವನ್ನೇ ತನ್ನ ಶಾಶ್ವತ ನೆಲೆಯಾಗಿಸಿಕೊಂಡಿದ್ದ ಥಕ್ಕರ್ ಸಾವು ಆಕೆಯ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಶಾಕ್ ನೀಡಿದೆ.
ಮಿಡೋಬ್ಯಾಂಕ್ ಪಾರ್ಕ್ ಬಳಿ ಪೈಪ್ ಲೇನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಗೆ ಥಕ್ಕರ್ ಶವ ಇದ್ದ ಸೂಟ್ ಕೇಸ್ ಸಿಕ್ಕಿ, ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಕ್ಕರ್ ಅವರ ನೆರೆ ಮನೆ ನಿವಾಸಿ 19 ವರ್ಷ ವಯಸ್ಸಿನ ಡೆನಿಯಲ್ ಸ್ಟನಿ ರೆಗಿನಲ್ಡ್ ಎಂಬಾತನನ್ನು ಬಂಧಿಸಲಾಗಿದ್ದು, ಲೈಂಗಿಕ ಕಿರುಕುಳ ಹಾಗೂ ಹತ್ಯೆ ಆರೋಪ ಹೊರೆಸಲಾಗಿದೆ. ಇತ್ತೀಚಿನ ಮಾಹಿತಿಯಂತೆ ಸ್ಥಳೀಯ ಕೋರ್ಟ್ (Burwood Local Court ) ಡೆನಿಯಲ್ ಗೆ ಜಾಮೀನು ನೀಡಲು ನಿರಾಕರಿಸಿದೆ. ಕೋರ್ಟ್ ಆವರಣದ ಹೊರಕಡೆ ಭಾರಿ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ನೆರೆದಿದ್ದು, ಥಕ್ಕರ್ ಸಾವಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.











Click it and Unblock the Notifications