ಏಪ್ರಿಲ್ 9ಕ್ಕೆ ಮೂರು ಉಪ ಚುನಾವಣೆ

ಕಳೆದ ಅಕ್ಟೋಬರ್ 14ರಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಸರಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ನಡೆದ ಆಪರೇಷನ್ ಕಮಲದಿಂದಾಗಿ ಈ ಉಪಚುನಾವಣೆ ಎದುರಾಗಿದೆ. ಜೆಡಿಎಸ್-ನ ಎಂ.ಸಿ. ಅಶ್ವತ್ಥ್ ರಾಜೀನಾಮೆಯಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದ್ದರೆ, ಕಾಂಗ್ರೆಸ್-ನ ಎಸ್.ವಿ. ರಾಮಚಂದ್ರ ರಾಜೀನಾಮೆಯಿಂದಾಗಿ ಜಗಳೂರು ಹಾಗೂ ಎಂ. ನಾರಾಯಣ ಸ್ವಾಮಿ (ಕಾಂಗ್ರೆಸ್) ರಾಜೀನಾಮೆಯಿಂದಾಗಿ ಬಂಗಾರಪೇಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಉಪಚುನಾವಣೆ ವೇಳಾಪಟ್ಟಿ
ಅಧಿಸೂಚನೆ ಪ್ರಕಟ : ಮಾ. 16
ನಾಮಪತ್ರ ಸಲ್ಲಿಸಲು ಕೊನೆ ದಿನ : ಮಾ. 23
ನಾಮಪತ್ರ ಪರಿಶೀಲನೆ : ಮಾ. 24
ನಾಮಪತ್ರ ವಾಪಸಿಗೆ ಕಡೇ ದಿನ : ಮಾ. 26
ಮತದಾನ : ಏ.9
ಮತ ಎಣಿಕೆ ದಿನಾಂಕ : ಮೇ 13
ಫಲಿತಾಂಶ ವಿಳಂಬ:
ಉಪಚುನಾವಣೆಗೆ ಮತದಾನ ನಡೆಯಲಿರುವುದು ಏಪ್ರಿಲ್ 9ಕ್ಕೆ. ಆದರೆ ಫಲಿತಾಂಶ ಪ್ರಕಟವಾಗುವುದು ಮೇ 13ರಂದು. ಅಂದರೆ ಚುನಾವಣೆ ನಡೆದ 1 ತಿಂಗಳ ಬಳಿಕ ಫಲಿತಾಂಶ. ಏಕೆಂದರೆ, ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗಿದೆ. ಅವುಗಳ ಫಲಿತಾಂಶ ಪ್ರಕಟವಾಗುವುದು ಮೇ 13ಕ್ಕೆ. ಹೀಗಾಗಿ ಕರ್ನಾಟಕದಲ್ಲಿ ಮೊದಲೇ ಚುನಾವಣೆ ನಡೆದು ಫಲಿತಾಂಶ ಪ್ರಕಟಿಸಿದರೆ ಅದು ಬೇರೆ ರಾಜ್ಯಗಳ ಮತದಾನದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಫಲಿತಾಂಶ ವಿಳಂಬವಾಗಲಿದೆ.












Click it and Unblock the Notifications