ಮಹಾದಾನಿ ಬಿ.ಕೆ. ಮರಿಯಪ್ಪ ಜನ್ಮದಿನಾಚರಣೆ

ಕಾರ್ಯಕ್ರಮ ನಡೆಯುವ ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ. ಬೆಳಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. 10.30ಕ್ಕೆ ಲೋಕಸಭೆ ಸದಸ್ಯ ಪಿ.ಸಿ.ಮೋಹನ್ ಅವರಿಂದ ಉದ್ಘಾಟನೆ. ಅಧ್ಯಕ್ಷತೆ ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ ಎನ್. ಪುಟ್ಟರುದ್ರ. ಮಧ್ಯಾಹ್ನ ಹಿರಿಯ ವಿದ್ಯಾರ್ಥಿಗಳ ಮಿಲನ. ಸ್ಥಳ: ವಿದ್ಯಾರ್ಥಿ ನಿಲಯ ಸಭಾಂಗಣ.
ದಿವಂಗತ ಬಿ.ಕೆ. ಮರಿಯಪ್ಪ ಅವರ ಹೆಸರು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನಜನಿತ. ಸ್ವಾತಂತ್ರ್ಯ ಪೂರ್ವದಲ್ಲಿ ಉಳ್ಳವರಿಗೆ ಮಾತ್ರ ವಿದ್ಯೆ ಸಾಧ್ಯವಾಗಿದ್ದಂತಹ ದಿನಗಳಲ್ಲಿ ಬಿ.ಕೆ. ಮರಿಯಪ್ಪ ಅವರು ಜಾತಿ ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಅವಕಾಶ ಮಾಡಿಕೊಟ್ಟರು. ತಮಗೆ ಕೇವಲ 35 ವರ್ಷವಿದ್ದಾಗ ಆಸ್ತಿಯನ್ನೆಲ್ಲ ದಾನ ಮಾಡಿದರು. ಇದರ ಫಲವಾಗಿ 1921ರ ಜುಲೈನಲ್ಲಿ 45 ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಮರಿಯಪ್ಪ ವಿದ್ಯಾರ್ಥಿ ನಿಲಯ ಆರಂಭವಾಯಿತು.
ಈ ವಿದ್ಯಾರ್ಥಿ ನಿಲಯದ ಸೌಲಭ್ಯ ಪಡೆದು ಉದ್ಯೋಗ ಹಿಡಿದ ವಿದ್ಯಾರ್ಥಿಗಳು 1946ಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿದರು. ಸಂಘವು ಸಂಸ್ಥೆಗೆ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಲೇ ಬಂದಿದೆ. ಬಿ.ಕೆ. ಮರಿಯಪ್ಪ ಧರ್ಮಸಂಸ್ಥೆ ಈಗ ಬಡ ವೃದ್ಧರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದಕ್ಕಾಗಿ ವೃದ್ಧಾಶ್ರಮ ಸ್ಥಾಪಿಸಲು ಸಿದ್ಧತೆ ನಡೆಸಿದೆ.











Click it and Unblock the Notifications