ಸುನಾಮಿಗೂ ಜಪಾನಿಗೂ ಬಿಡಿಸಲಾರದ ನಂಟು

ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು.ಇಲ್ಲಿ "ತ್ಸು" ಅಂದರೆ "ಬಂದರು" ಹಾಗೂ "ನಾಮಿ"ಎಂದರೆ "ಅಲೆ" ಎಂಬ ಅರ್ಥ ಕೊಡುತ್ತದೆ.ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗು ಬಹುವಚನ ಎರಡಕ್ಕೂ ಬಳಸುತ್ತಾರೆ, ಮೀನುಗಾರರು ಅಲೇಗಳ ಬಗ್ಗೆ ಹೆಚ್ಚೇನು ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದ್ದಂತೆ.
ವಿಡಿಯೋಗಳು: ಸುನಾಮಿ ಅಲೆಗಳ ರೌದ್ರ ನರ್ತನ ಚಿತ್ರಗಳು | ಸುನಾಮಿ ಅಲೆಗಳ ದಾಳಿಗೆ ಕುಬ್ಜವಾದ ಜಪಾನ್
ಸುನಾಮಿಯನ್ನು ದೈತ್ಯ ಅಲೆಗಳು ಎಂದೂ ಸಂಬೋಧಿಸುವುದುಂಟು, ಕಾರಣ ಇದರ ಅತೀವ ಉಬ್ಬರ - ಇಳಿತಗಳು. ಈ ದೈತ್ಯ ಅಲೆಗಳು ಬಹಳಷ್ಟು ಬಾರಿ ಸೂರ್ಯ ಚಂದ್ರರ ಗುರುತ್ವಾಕರ್ಷಣ ಸೆಳೆತದಿಂದಾಗಿ ಉಂಟಾಗುವ ಸ್ವಾಭಾವಿಕ ಉಬ್ಬರ - ಇಳಿತಗಳು ಎನ್ನುವುದುಂಟು. ಹುಣ್ಣಿಮೆ ಹತ್ತಿರ ಬಂದಂತೆ ಹುಣ್ಣಿಮೆಯ ರಾತ್ರಿಯಲ್ಲಿ ಕಡಲು ಸ್ವಲ್ಪ ಹೆಚ್ಚಾಗಿ ಉಕ್ಕಿದರೂ ಅದಕ್ಕೆ ಯಾವುದೇ ಗ್ರಹ ಅಥವಾ ಆಕಾಶಕಾಯಗಳ ಪ್ರಭಾವ ಎಂಬುದಂತೂ ಸತ್ಯಕ್ಕೆ ದೂರವಾದ ಮಾತು. ಸುನಾಮಿಗೆ ಗ್ರಹ ಪ್ರಭಾವ ಕಾರಣ ಎನ್ನುವುದನ್ನು ಸಮುದ್ರ ಅಧ್ಯಯನ ಮಾಡುವ ವಿಜ್ಞಾನಿಗಳು ಎಂದಿಗೂ ನಂಬುವುದಿಲ್ಲ.
ಸುನಾಮಿಗೆ ಕಾರಣಗಳು, ಲಕ್ಷಣಗಳು : ಸಮುದ್ರದ ಕೆಳಪದರಿನಲ್ಲಿ ಏಕಾಏಕಿ ಉಂಟಾಗುವ ತೀವ್ರ ಕಂಪನದಿಂದ ಅಲ್ಲಿನ ನೀರು ನೇರವಾಗಿ ಮೇಲಕ್ಕೆ ಹೊರ ಚೆಲ್ಲಲ್ಪಡುತ್ತದೆ. ಈ ರೀತಿ ಅಲೆಗಳು ಏಕಾಏಕಿ ಸರಣಿಯಾಗಿ ಹೊರದಬ್ಬಲ್ಪಡುತ್ತದೆ. ಸಮುದ್ರದಡಿಯಲ್ಲಿ ಉಂಟಾಗುವ ಭೂ ಕುಸಿತಗಳು, ಜ್ವಾಲಾಮಖಿ ಉದ್ಭವಗಳು, ನೀರಿನ ಶಾಂತತೆಯನ್ನು ಕದಡಿ ಸುನಾಮಿ ಸೃಷ್ಟಿಸಬಹುದು. ತೀವ್ರ ಶಬ್ದದೊಂದಿಗೆ ನೀರಿನ ವಾಸನೆಯನ್ನೂ ಬದಲಿಸಬಲ್ಲ ಸುನಾಮಿ ಅಲೆಗಳು ಭೂ ಕಂಪನಕ್ಕೂ ಕಾರಣವಾಗಬಲ್ಲುದು.
ಸುನಾಮಿ ತಡೆಗಟ್ಟಲು ಸಾಧ್ಯವೇ?: ಸುನಾಮಿಗಳನ್ನು ತಡೆಗಟ್ಟಲಾಗುವುದಿಲ್ಲ ಅಥವಾ ಕರಾರುವಾಕ್ಕಾಗಿ ಇಂಥ ದಿನ ಸಂಭವಿಸಲಿದೆ ಎಂದು ಭವಿಷ್ಯ ನುಡಿಯಲಾಗುವುದಿಲ್ಲ. ಆದರೆ, ಸದ್ಯದಲ್ಲೇ ಸಂಭವಿಸುವ ಸುನಾಮಿಯ ಮುನ್ನೆಚ್ಚರಿಕೆ ಸೂಚನೆಗಳು ಹಾಗೂ ಹಾನಿಯನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ರೂಪಿಸಬಹುದು. ಆದರೆ, 2004ರಲ್ಲಿ ಶ್ರೀಲಂಕಾದಲ್ಲಿ ಸಂಭವಿಸಿದ ಹಿಂದೂಮಹಾಸಾಗರದ ಭೂಕಂಪದ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು. ಪ್ರಾಣಿ ಪಕ್ಷಿಗಳು ತೀರ ಪ್ರದೇಶದಿಂದ ಎತ್ತರ ಪ್ರದೇಶಕ್ಕೆ ಪಲಾಯನ ಮಾಡಿದ್ದವು. 13 ರಿಂದ 15 ಅಡಿ ಎತ್ತರದ ಸುನಾಮಿ ತಡೆಗೋಡೆಯನ್ನು ನಿರ್ಮಿಸಬಹುದು. ಇದರಿಂದ ವೇಗವನ್ನು ನಿಧಾನಗೊಳಿಸಬಹುದಾದರೂ, ಜೀವ ಹಾನಿ ತಡೆಯಲು ಸಾಧ್ಯವಿಲ್ಲ. ಪ್ರಕೃತಿಯ ಶಕ್ತಿ ಮುಂದೆ ತಲೆಬಾಗಲೇಬೇಕು.
1923ರಲ್ಲಿ ಕಾಂಟೋದಲ್ಲಿ 8.3 ತೀವ್ರತೆಯಿದ್ದ ಸುನಾಮಿ ಅಬ್ಬರಕ್ಕೆ ಸುಮಾರು 1,43,000 ಜನ ಸಾವನ್ನಪ್ಪಿದ್ದರು. 1996ರಲ್ಲಿ ಕೊಬೆ ನಗರದಲ್ಲಿ 7.2 ಮ್ಯಾಗ್ನಿಟುಡ್ ಇದ್ದ ಕಂಪನದಿಂದ 6,400 ಜನ ಮರಣ ಹೊಂದಿದ್ದರು. ಹಿಂದೂ ಮಹಾ ಸಾಗರದಲ್ಲಿ 2004ರಲ್ಲಿ ಸಂಭವಿಸಿದ್ದ ಸುನಾಮಿ ಅಬ್ಬರವು 12 ದೇಶಗಳ 230,000 ಜನರನ್ನು ಬಲಿ ತೆಗೆದುಕೊಂಡಿತ್ತು. 8.9 ತೀವ್ರತೆಯ ಪ್ರಸ್ತುತ ಸುನಾಮಿ ಅಬ್ಬರ ಇನ್ನೂ 20 ದೇಶಗಳಿಗೆ ಹಬ್ಬುವ ಸೂಚನೆ ಕೊಟ್ಟಿದೆ.












Click it and Unblock the Notifications