ವಿಶ್ವಕಪ್ :ತ್ರಿವಿಕ್ರಮ ಸಚಿನ್ ರಿಂದ ಮತ್ತೊಂದು ಪರಾಕ್ರಮ
ನವದೆಹಲಿ, ಮಾ.10: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರವಾದ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆ ಅವತ್ತು ಒಂದು ದಾಖಲೆ ನಿರ್ಮಾಣ ಗ್ಯಾರಂಟಿ. ದಾಖಲೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನನ್ನ ನೈಜ ಆಟಕ್ಕೆ ಹೆಚ್ಚು ಕೊಡುತ್ತೇನೆ ಎಂದು ಸಚಿನ್ ಹೇಳಿಕೊಂಡರೂ ದಾಖಲೆಗಳು ಅವರನ್ನು ಹಿಂಬಾಲಿಸದೇ ಬಿಡುವುದಿಲ್ಲ. ಬುಧವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನೆದರ್ಲೆಂಡ್ ವಿರುದ್ಧದ ವಿಶ್ವಕಪ್ 2011 ಲೀಗ್ ಪಂದ್ಯದಲ್ಲೂ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ವಿಶ್ವಕಪ್ ಟೂರ್ನಿಗಳಲ್ಲಿ 2000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂದು ಕೀರ್ತಿಗೆ ಪಾತ್ರರಾದರು.
ನೆದರ್ಲೆಂಡ್ ನ ಟೆನ್ ಡೊಶೆಟ್‌ರ 4ನೇ ಓವರ್‌ನಲ್ಲಿ 4, 5 ಮತ್ತು 6ನೇ ಎಸೆತಗಳಲ್ಲಿ ಸತತವಾಗಿ ಬೌಂಡರಿ ಗಿಟ್ಟಿಸುವ ಮೂಲಕ ಈ ಮಹತ್ವದ ಮೈಲುಗಲ್ಲನ್ನು 37 ವರ್ಷದ ಮಹಾನ್ ಕ್ರಿಕೆಟಿಗ ಮುಟ್ಟಿದರು. ಸಚಿನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 22 ಎಸೆತಗಳನ್ನು ಎದುರಿಸಿ 6 ಬೌಂಡರಿ ಇರುವ 27 ರನ್‌ಗಳನ್ನು ಗಳಿಸಿ ಪೀಟರ್ ಸೀಲಾರ್ ಎಸೆತವನ್ನು ಬೌಂಡರಿಗೆ ಅಟ್ಟಲು ವಿಫಲ ಯತ್ನ ನಡೆಸಿ ಬ್ರಾಡ್ಲಿ ಕ್ರೂಗರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್
ದಾಖಲೆಯ 6ನೇ ವಿಶ್ವಕಪ್ ಆಡುತ್ತಿರುವ ಸಚಿನ್ ತೆಂಡುಲ್ಕರ್ 1992ರಲ್ಲಿ ಮೊದಲ ವಿಶ್ವಕಪ್ ಆಡಿದ್ದರು. ಈ ವರೆಗೆ 40 ವಿಶ್ವಕಪ್ ಪಂದ್ಯಗಳನ್ನು ಆಡಿ 39 ಇನಿಂಗ್ಸ್‌ಗಳಲ್ಲಿ 2009 ರನ್ ಪೂರೈಸಿದ್ದಾರೆ. ವಿಶ್ವಕಪ್‌ನಲ್ಲಿ 5 ಶತಕ ಮತ್ತು 13 ಅರ್ಧಶತಕ ಬಾರಿಸಿದ್ಧಾರೆ. ಇದು ಕೂಡಾ ದಾಖಲೆಯಾಗಿದೆ. ಗರಿಷ್ಠ ರನ್ 152. 447 ಏಕದಿನ ಪಂದ್ಯಗಳಲ್ಲಿ 47 ಶತಕ 93 ಅರ್ಧಶತಕಗಳಿರುವ 17815 ರನ್ ಗಳನ್ನು ಸಚಿನ್ ಕಲೆಹಾಕಿದ್ದಾರೆ. ಗರಿಷ್ಠ ರನ್ 200 ರನ್ ಗಳಿಸಿರುವ ಏಕೈಕ ಆಟಗಾರ. ಆಸ್ಟ್ರೇಲಿಯಾ ಆಟಗಾರ ರಿಕಿ ಪಾಂಟಿಂಗ್ ಹೆಚ್ಚು ರನ್ ಗಳಿಸಿದ ಆಟಾಗರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಿಕಿ 42 ವಿಶ್ವಕಪ್ ಪಂದ್ಯಗಳಿಂದ 1577 ರನ್ ಗಳಿಸಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications