ಕ್ವಾರ್ಟರ್-ಗೂ ಮುನ್ನ ಭಾರತದ ಪರಾಕ್ರಮವೇನು?

ಬೆಂಗಳೂರು, ಮಾ. 10: ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ವಿಜಯದುಂದುಭಿ ಮೊಳಗಿಸುವ ಮುನ್ನ ಧೋನಿ ಪಡೆ ಎಡವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಮೂರು ಗೆಲುವು ಒಂದು ಟೈ ಕೊರಳಿಗೆ ಹಾಕಿಕೊಂಡು ಕ್ವಾರ್ಟರ್ ಫೈನಲ್ ಹಂತ ತಲುಪುವ ಭಾರತ ತಂಡದ ಗುರಿಯೇನೋ ಸದ್ಯಕ್ಕೆ ಈಡೇರಿದೆ...ಆದರೆ!? ಮುಂದಿದೆ ಮಾರಿಹಬ್ಬ.

ಹೌದು ತಕ್ಷಣಕ್ಕೆ ಶನಿವಾರ ನಾಗಪುರದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದೆದುರು ಭಾರತ ತಂಡ ಎಚ್ಚೆತ್ತು ಆಡಬೇಕಿದೆ. ಫಲಿತಾಂಶವು ಭಾರತದ ತಂಡದ ಸದ್ಯದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ಅದು ತಂಡದ ಮಾನ ಮತ್ತು ವಿಶ್ವ್ ಕಪ್-ನ ಮುಂದಿನ ಹಂತಗಳ ಮೇಲೆ ಖಂಡಿತ ಪ್ರಭಾವ ಬೀರಲಿದೆ. ಭಾರತ ಇದುವರೆಗೆ ಅಜೇಯವಾಗುಳಿದಿದೆ. ಓಕೆ ಫೈನ್! ಆದರೆ ಆ ಗೆಲುವುಗಳು ತಂಡದ ಖ್ಯಾತಿಗೆ ತಕ್ಕಂತೆ ಇರಲಿಲ್ಲ ಎಂಬುದೇ ಚಿಂತನಾರ್ಹ. ಕಪ್ ಗೆಲ್ಲುವ ಫೇವರೆಟ್ ತಂಡ ಬೇರೆ ತಂಡಗಳಲ್ಲಿ ಈಗಾಗಲೇ ದಿಗಿಲುಹುಟ್ಟಿಸುವಂತೆ ಆಡಬೇಕಿತ್ತು. ಅದಕ್ಕೇ ಹೇಳಿದ್ದು ಭಾರತ ತಂಡ ಇನ್ನೂ ಉತ್ತುಂಗ ತಲುಪಬೇಕಿದೆ.

ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ಬುಧವಾರ ನೆದರ್-ಲ್ಯಾಂಡ್ ವಿರುದ್ಧದ ಪಂದ್ಯವನ್ನೇ ಗಮನಿಸಿ. ಅದಕ್ಕೂ ಮುನ್ನ, ಬ್ಯಾಟ್ಸ್ ಮನ್ ಗಳು ಅದ್ಭುತ ಫಾರಂನಲ್ಲಿದ್ದಾರೆ. ಅವರೇದೇನೂ ಚಿಂತೆಯಿಲ್ಲ. ಆದರೆ ಬೌಲರ್-ಗಳದ್ದೇ ಯೋಚನೆ ಎಂದು ತಂಡದ ನಾಯಕ ಎಂ.ಎಸ್. ಧೋನಿ ಗೋಳಾಡಿದ್ದರು. ಸರಿ, ನಮ್ಮ ನಾಯಕನನ್ನು ಯಾಕೆ ನಿರಾಶೆಪಡಿಸಬೇಕು ಎಂದು ಬೌಲರ್-ಗಳು ಒಂದು ಕೈ ನೋಡಿಯೇ ಬಿಟ್ಟರು. ಅದರಲ್ಲೂ ಸ್ಪಿನ್ನರ್-ಗಳು ತಮ್ಮ ಲಯ ಕಂಡುಕೊಂಡರು. ಆದರೆ ಈ ಬಾರಿ ಬ್ಯಾಟ್ಸ್ ಮನ್-ಗಳು ತಂಡಕ್ಕೆ ಕೈಕೊಟ್ಟರು. ಫೀಲ್ಡಿಂಗ್? ಬಹುಶಃ ಭಾರತಕ್ಕೆ ಅದು ಎಂದಿಗೂ ಸಮಸ್ಯೆಯೇ. ಪರಿಣಾಮ ಆಯಾಸ ಗೆಲುವು. ಸೆಹವಾಗ್ ತಮ್ಮ ಎಂದಿನ ಆಟ ಆಡುತ್ತಿದ್ದಾರೆ. ಆದರೆ ವಿಶ್ವಕಪ್-ನಲ್ಲಿ ಅದೂ 300 ಪ್ಲಸ್ ಚೇಸ್ ಮಾಡುವಾಗ ಆತ ಸುಧಾರಿಸಿಕೊಳ್ಳಲೇಬೇಕು.

ಇದೆಲ್ಲ ಇದ್ದಿದ್ದೇ. ಅವ ಹಂಗ್ ಆಡ್ಲಿಲ್ಲ. ಇವ ಹಿಂಗೆ ಬೌಲ್ ಮಾಡ್ಲಿಲ್ಲ ಎಂಬುದೆಲ್ಲ ಸಾಮಾನ್ಯವೇ ಆದರೂ ತಂಡದ ಪ್ರದರ್ಶನ ಸುಧಾರಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಹೊರಬರಲು ತಂಡಕ್ಕೆ ದೊರೆಯಲಿರುವ ಅತ್ಯುತ್ತಮ ಅವಕಾಶ ಎಂದರೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ. ತಂಡದ ನಿಜವಾದ ಬಂಡವಾಳ ನಾಗಪುರ ಬಯಲಿನಲ್ಲಿ ಬಟಾಬಯಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+