ಬೆಂಗಳೂರಿನಲ್ಲಿ ಮಾ. 10, 11 ಕಾವೇರಿ ನೀರು ಇಲ್ಲ
ಬೆಂಗಳೂರು,
ಮಾ. 10: ಬೇಸಿಗೆಯ ಬಿಸಿ ನಿಧಾನವಾಗಿ ಕಾಲಿಡುತ್ತಿದೆ. ನೀರಿನ ಸರಬರಾಜನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಸರಕಾರ ಘೋಷಿಸಿರುವಾಗ ನಗರದಲ್ಲಿ ನೀರಿನ ಬರ ರಾಚುತ್ತಿದೆ. ಈ ಮಧ್ಯೆ ಕಾವೇರಿ ನಾಲ್ಕನೇ ಹಂತ, 2ನೇ ಘಟ್ಟದಲ್ಲಿ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಮಾರ್ಚ್ 10 ಮತ್ತು 11) ಬೆಳಗ್ಗೆ 10ರಿಂದ ರಾತ್ರಿ 10 ರವರೆಗೆ ಕುಡಿಯುವ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಜಲಮಂಡಲಿ ತಿಳಿಸಿದೆ. id="toptextpromo">ಕೇಂದ್ರ,
ಪೂರ್ವ ಮತ್ತು ಉತ್ತರ ಭಾಗಗಳಲ್ಲಿನ ಪ್ರದೇಶಗಳಿಗೆ ಎರಡು ದಿನಗಳ ಕಾಲ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೆ ನಗರದ ಉಳಿದ ಪ್ರದೇಶಗಳಲ್ಲೂ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ನಿತ್ಯ ಕಾವೇರಿ ನದಿಯಿಂದ 500 ದಶಲಕ್ಷ ಲೀಟರ್ ನೀರು ತರುವ ಸಲುವಾಗಿ ಕೊಳವೆಗಳನ್ನು ಅಳವಡಿಸಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ತೊರೆಕಾಡನಹಳ್ಳಿಯಲ್ಲಿ
48 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಿಸಲಾಗುತ್ತಿದ್ದು, ಇದೇ ಜಾಗದಲ್ಲಿ ಕಾವೇರಿ 2 ಮತ್ತು 3ನೇ ಹಂತದ ಕೊಳವೆ ಮಾರ್ಗಗಳು ಹಾದುಹೋಗಿವೆ. ಹೀಗಾಗಿ, ಈ ಕೊಳವೆ ಮಾರ್ಗಗಳನ್ನು ಬೇರೆಗೆಡೆಗೆ ವರ್ಗಾಯಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, 2 ಮತ್ತು 3ನೇ ಹಂತದ ನೀರಿನ ಪಂಪ್-ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಂಡಳಿ ಹೇಳಿದೆ.











Click it and Unblock the Notifications