ಮಾ.13: ಆಗುಂಬೆ ಘಾಟ್ ಗೆ ಬರ್ತೀರಾ ತಾನೆ
ತೀರ್ಥಹಳ್ಳಿ,
ಮಾ.9: ಕಾಳಿಂಗ ಸರ್ಪ ಸೇರಿದಂತೆ ಅನೇಕಾನೇಕ ಪಶು ಪಕ್ಷಿ ಸಂಕುಲಕ್ಕೆ ಆಶ್ರಯತಾಣವಾಗಿರುವ ಆಗುಂಬೆ ಘಾಟಿ ಅರಣ್ಯಪ್ರದೇಶಕ್ಕೆ ಈಗ ಪ್ಲಾಸ್ಟಿಕ್ ಎಂಬ ಮಾರಿ ಆವರಿಸಿದೆ. ಸ್ಥಳೀಯ ಸಂಸ್ಥೆಗಳ ನೆರವಿನಿಂದ ಮಂಗಳೂರು ಮಲೆನಾಡು ಯೂಥ್ ಅಸೋಸಿಯೇಷನ್ ಹಾಗೂ ರೋಟರಿ ಕ್ಲಬ್ ನವರು ಮಾ.13ರಂದು ಶ್ರಮದಾನವನ್ನು ಹಮ್ಮಿಕೊಳ್ಳಲಾಗಿದೆ. ಆಗುಂಬೆಯನ್ನು ಪ್ಲಾಸ್ಟಿಕ್ ಮುಕ್ತ ವಾತಾವರಣ ಉದ್ದೇಶದಿಂದ ಪರಿಸರ ಪ್ರೇಮಿಗಳು ಅಂದು ಅಲ್ಲಿ ಸೇರಲಿದ್ದಾರೆ. ಬಾಲಿವುಡ್ ನ ಸ್ಟಂಟ್ ಮ್ಯಾನ್ ಚೀತಾ ಯಜ್ಞೇಶ್ ಶೆಟ್ಟಿ ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಹೇಳುತ್ತಾರೆ. id="toptextpromo">ಅಂದು
ಬೆಳಗ್ಗೆ 8 ಗಂಟೆ ಆಸಕ್ತರು ಈ ಶ್ರಮದಾನದಲ್ಲಿ ಜೊತೆಗೂಡಬಹುದು. ಆಗುಂಬೆ ಘಾಟಿಯಲ್ಲಿ ಮಿತಿಮೀರಿದ ಪ್ಲಾಸ್ಟಿಕ್ ತ್ಯಾಜ್ಯದ ಪರಿಣಾಮವಾಗಿ ಇಲ್ಲಿನ ಪ್ರಾಣಿ, ಪಕ್ಷಿ, ಕೀಟ ಸಂಕುಲವಲ್ಲದೆ ನೀರು ಕೂಡ ಕಲುಷಿತಗೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಪ್ಲಾಸ್ಟಿಕ್ ತ್ಯಾಜ್ಯದ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಅಗತ್ಯ ಶಾಲಾ ಮಕ್ಕಳಿಗೆ ಮತ್ತು ಜನರಿಗಿದೆ. ನೂರಾರು ವರ್ಷಗಳಾದರೂಕರಗದ ಪ್ಲಾಸ್ಟಿಕ್ ನಿಂದ ಇಲ್ಲಿನ ಪರಿಸರವನ್ನು ರಕ್ಷಿಸಲು ಈ ಜನಜಾಗೃತಿ ಅಭಿಯಾನ ಅವಶ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಈ
ಸ್ವಚ್ಛತಾ ಅಭಿಯಾನದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ ಸಾಹಸ ನಿರ್ದೇಶಕ ಚೀತಾ ಯಜ್ನೇಶ್ ಶೆಟ್ಟಿ ಅವರು ಪಾಲ್ಗೊಳ್ಳುತ್ತಿದ್ದಾರೆ. ತೀರ್ಥಹಳ್ಳಿ ತಾಲ್ಲೂಕು ಪ್ಲಾಸಿಕ್ ಮುಕ್ತ ವಲಯವನ್ನಾಗಿಸಿದ ನಂತರ ಮಂಡಗದ್ದೆ ಹಾಗೂ ಹಂತ ಹಂತವಾಗಿ ಇಡೀ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸ್ವಚ್ಛತಾ ಅಭಿಯಾನ ಮುಂದುವರೆಸಲಾಗುವುದು ಎಂದು ಮಲೆನಾಡು ಯೂತ್ ಅಸೋಷಿಯೇಷನ್, ಮಂಗಳೂರು ವಿಭಾಗದ ಮುಖ್ಯಸ್ಥ ಟಿ ಜಿಪ್ರಸಾದ್(ಚಿನ್ನು) ತಿಳಿಸಿದರು.











Click it and Unblock the Notifications