ಮೈಸೂರು ವಿವಿ ಲೈಂಗಿಕ ಕಿರುಕುಳ, ದೂರಿದ್ದಕ್ಕೆ ಬೆದರಿಕೆ

Mysore varsity sex harassment case
ಮೈಸೂರು, ಮಾ.8: ಪಿಎಚ್‌ಡಿ ವಿದ್ಯಾರ್ಥಿನಿ ಸರಿತಾ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ನಡುವೆ ಸರಿತಾ ಪತಿ ವಿಜಯ್ ಗೆ ಜೀವ ಬೆದರಿಕೆ ಒಡ್ಡಲಾಗಿದ್ದು, ವಿಸಿ ವಿರುದ್ಧ ನೀಡಿರುವ ದೂರು ವಾಪಾಸ್ ಪಡೆಯುವಂತೆ ನಾಲ್ವರು ಒತ್ತಾಯಿಸಿದ್ದಾರೆ. ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರೊ. ಶಿವಬಸವಯ್ಯ ಅವರನ್ನು ಅಮಾನತ್ತಿನಲ್ಲಿಟ್ಟು, ಮುಖ್ಯಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಮಂಗಳವಾರ ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸರಿತಾ ಮಾ.1ರಂದು ಪ್ರೊ.ಶಿವಬಸವಯ್ಯ ವಿರುದ್ಧ ಕುಲಪತಿ ವಿಜಿ ತಳವಾರ್ ಅವರಿಗೆ ದೂರು ನೀಡಿದ್ದರು. ಮಾ.3ರಂದು ಪ್ರೊ.ಶಿವಬಸವಯ್ಯರನ್ನು ವಿಚಾರಣೆ ನಡೆಸಿ ವಿದ್ಯಾರ್ಥಿನಿ ಮಾಡಿರುವ ಆರೋಪವನ್ನು ಕುಲ ಸಚಿವರು ತಳ್ಳಿಹಾಕಿದ್ದರು. ಬದಲಿಗೆ ಸರಿತಾರ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವಮಾನಿಸಿದ್ದರು. ನಂತರ, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಸರಿತಾರ ಪತಿ ಮೈಸೂರು ವಿವಿ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಾಣಿಶಾಸ್ತ್ರದ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಶಿವಬಸವಯ್ಯ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಿರುವ ವಿದ್ಯಾರ್ಥಿನಿ ಸರಿತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಕೆಯನ್ನು ಬಿಎಂ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಉಪಚರಿಸಲಾಗುತ್ತಿದೆ. ಆಕೆಯಿಂದ ಹೇಳಿಕೆ ಇನ್ನೂ ಪಡೆಯಲಾಗಿಲ್ಲ ಎಂದು ವಿಜಯನಗರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

ಈ ನಡುವೆ ಮಾ.5ರಂದು ಪ್ರೊ.ಶಿವಬಸವಯ್ಯ ಅವರಿಗೆ ನೋಟಿಸ್ ಜಾರಿ ಮಾಡಿ ಲಿಖಿತ ರೂಪದಲ್ಲಿ ವಿವರಣೆ ಕೇಳಲಾಗಿದೆ. ಸರಿತಾ ಸಂಶೋಧನೆಯನ್ನು ಮುಂದುವರೆಸಬಹುದಾಗಿದ್ದು, ಬೇರೆ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ನೀಡಲಾಗುವ 60 ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ಯಾರಿಗೆ ನೀಡಬೇಕು ಎಂಬುವುದು ಮಾರ್ಗದರ್ಶಕರು ನಿರ್ಧರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+