ಪ್ರತ್ಯಕ್ಷ ತೆರಿಗೆಯಿಂದ ಸಹಕಾರಿ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ

ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸೋಮವಾರ (March 7) ಪತ್ರ ಬರೆದಿರುವ ತೋಟಗಾರ್ಸ್ ಸೊಸೈಟಿ ಅಧ್ಯಕ್ಷ ಶೀಗೇಹಳ್ಳಿ ಶಾಂತಾರಾಮ ಹೆಗಡೆ ಅವರು ಪ್ರಸ್ತಾವಿತ ತೆರಿಗೆ ನೀತಿಯಿಂದ ಸಹಕಾರಿ ಸಂಸ್ಥೆಗಳ ಮೇಲೆ ಆಗುವ ದುಷ್ಪರಿಣಾಮಗಳ್ನು ಮನದಟ್ಟುಪಡಿಸಿದ್ದಾರೆ. ಪತ್ರವನ್ನು ನೇರವಾಗಿ ಪ್ರಧಾನಿ ಸಿಂಗ್ ಅವರಿಗೂ ಕಳಿಸಿಕೊಟ್ಟಿದ್ದಾರೆ.
ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಉದ್ದಿಮೆಗಳು ಗಳಿಸುವ ಲಾಭ ಕೆಲವೇ ವ್ಯಕ್ತಿಗಳಿಗೆ ದೊರೆಯುತ್ತದೆ. ಅದೇ ಸಹಕಾರಿ ಸಂಘಗಳು ಕಾರ್ಪೋರೇಟ್ ಸಂಸ್ಥೆಗಳಿಗಿಂತ ಭಿನ್ನವಾಗಿವೆ. ಸಹಕಾರ ಕ್ಷೇತ್ರವು ಸಮಾಜಕ್ಕೆ ಹಾಗೂ ದೇಶದ ಆರ್ಥಿಕ ಸ್ಥಿತಿಗೆ ನೀಡಿದ ಕೊಡುಗೆ ಮೌಲ್ಯ ಮಾಪನಕ್ಕೆ ನಿಲುಕದಂತದ್ದು. ಉದ್ದೇಶಿತ ನೇರ ತೆರಿಗೆ ಸಂಹಿತೆಯನ್ನು ಸಹಕಾರಿ ಸಂಘಗಳಿಗೆ ಅನ್ವಯಿಸುವುದನ್ನು ಕೈ ಬಿಡದಿದ್ದಲ್ಲಿ ಸಹಕಾರಿ ಸಂಘಗಳು ದುರ್ಬಲಗೊಂಡು - ಸದಸ್ಯರಿಗೆ ಪ್ರಮುಖವಾಗಿ ರೈತರಿಗೆ ಅಗತ್ಯ ಸೇವೆ ಸಲ್ಲಿಸಲಾರದ ಪರಿಸ್ಥಿತಿ ಉದ್ಭವವಾಗುತ್ತದೆ ಎಂದು ಶಾಂತಾರಾಮ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಹಕಾರಿ ರಂಗದ ಪ್ರಾಮುಖ್ಯವಾಗಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಿತರಕ್ಷಣೆಗಾಗಿ ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿದ ನೇರ ತೆರಿಗೆ ಸಂಹಿತೆಯನ್ನು ಸಹಕಾರ ಸಂಘಗಳಿಗೆ ಅನ್ವಯಿಸದಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಇದನ್ನು ಕೈ ಬಿಡುವಂತೆ ವ್ಯವಸ್ಥೆ ಮಾಡಬೇಕಾಗಿ ಶಾಂತರಾಮ ಅವರು ಯಡಿಯೂರಪ್ಪ ಅವರನ್ನು ಈ ಪತ್ರ ಮುಖೇನ ವಿನಂತಿಸಿದ್ದಾರೆ.












Click it and Unblock the Notifications