ಮೈಸೂರಿನಲ್ಲಿ ನಾಲ್ಕು ಹೊಸ ಲೇಔಟ್ ಗಳು

ಹೊಸದಾಗಿ ನಾಲ್ಕು ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಮುಡಾವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಲಿಂಗಾಬುಧಿ ಕೆರೆ ಭಾಗದಲ್ಲಿ ಸುಮಾರು 434 ಎಕರೆ ಪ್ರದೇಶದಲ್ಲಿ 'ನಾಲ್ವಡಿ ಕೃಷ್ಣರಾಜ ನಗರ", ಲಲಿತಾದ್ರಿಪುರ 2ನೇ ಹಂತದಲ್ಲಿ ಸುಮಾರು 352 ಎಕರೆ ಪ್ರದೇಶದಲ್ಲಿ 'ಸ್ವರ್ಣಜಯಂತಿ ನಗರ" ಸೇರಿದಂತೆ ಒಟ್ಟು 1,500 ಎಕರೆ ಪ್ರದೇಶದಲ್ಲಿ ಸುಮಾರು 15,000 ನಿವೇಶನಗಳ ಸುಸಜ್ಜಿತ ಬಡಾವಣೆಗಳ ನಿರ್ಮಾಣಕ್ಕೆ ಮುಡಾ ಯೋಜನೆ ಹಾಕಿಕೊಂಡಿದೆ ಎಂದು ಮುಡಾ ಅಧ್ಯಕ್ಷ ಎಲ್ ನಾಗೇಂದ್ರ ಹೇಳಿದ್ದಾರೆ.
ರೈತರ ಸಹಕಾರ: ಈ ಯೋಜನೆ ಅನುಷ್ಠಾನಕ್ಕೆ ರೈತರ ಸಹಭಾಗಿತ್ವ ಅಗತ್ಯ. ಹೊಸ ಲೇಔಟ್ ಗಳ ನಿವೇಶನಗಳಲ್ಲಿ ಶೇ.10ರಷ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿಡಲಾಗುತ್ತದೆ. ಬೇಡಿಕೆ ಆಧಾರದ ಮೇಲೆಬಹುಮಹಡಿ ಕಟ್ಟಡಗಳ ನಿರ್ಮಿಸಲಾಗುವುದು. ರಿಂಗ್ ರಸ್ತೆ ಸಮೀಪದ ಕೆರೆಗಳ್ಳಿ ಆರ್ ಟಿ ನಗರ ನಿವೇಶನಗಳನ್ನು ಮುಂದಿನ 4 ತಿಂಗಳುಗಳಲ್ಲಿ ವಿತರಿಸಲಾಗುವುದು ಎಂದರು.
ಆಶ್ರಯ ಅಭಿವೃದ್ಧಿ: ಮಂಡಕಳ್ಳಿ, ರಮ್ಮನಹಳ್ಳಿ, ಬೋಗಾದಿ, ರಮಾಬಾಯಿನಗರದಲ್ಲಿರುವ ಆಶ್ರಯ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ವಿಶೇಷ ಯೋಜನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಳಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಸುಮಾರು 9 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಮುಡಾ ಆಯುಕ್ತ ಸಿ.ಜೆ. ಬೆಟ್ಸೂರ್ ಮಠ್ ಹೇಳಿದರು.












Click it and Unblock the Notifications