ಬೆಂಗ್ಳೂರ್ನಲ್ಲಿ ಭೀಮಸೇನ ಜೋಷಿ ಗಾನವೈಭವ

bhimsen-joshi
ಬೆಂಗಳೂರು, ಮಾ. 4: ದಿವಂಗತ ಪಂಡಿತ್‌ ಭೀಮಸೇನ ಜೋಶಿ ಕುರಿತಾದ 'ಗಾನ ವೈಭವ' ಆಡಿಯೊ, ವೀಡಿಯೊ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಸಂಗೀತ ದಿಗ್ಗಜ ಭೀಮಣ್ಣ ನಮ್ಮೊಂದಿಗೆ ಮತ್ತೆ ದನಿಯಾಗಲಿದ್ದಾರೆ. ಕೆ.ಆರ್‌. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನಾಳೆ ಅಂದರೆ, ಶನಿವಾರ ಮಾರ್ಚ್‌ 5ರಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ಪಂಡಿತ್‌ ಪರಮೇಶ್ವರ ಹೆಗಡೆ, ಸಮಕಾಲೀನ ಇತಿಹಾಸರಾರ ಮತ್ತು ಕ್ರಿಕೆಟ್ ಬರಹಗಾರ ಡಾ.ರಾಮಚಂದ್ರ ಗುಹ ಮತ್ತು ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಪತ್ರಿಕೆಯ ಸಂಪಾದಕ ಕೆ.ಎನ್‌. ಶಾಂತಕುಮಾರ್ ಭಾಗವಹಿಸಲಿದ್ದಾರೆ. ವಸಂತ ಪ್ರಕಾಶನ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಗೀತ ಪ್ರಿಯರು, ಭೀಮಸೇನ ಜೋಷಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಸಂತ ಪ್ರಕಾಶನದ ಸಾಹಿತಿ-ಸಂಪಾದಕ ಎಸ್. ದಿವಾಕರ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98863 99125

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+