ಒರಟು ಪೊಲೀಸರ ಮೇಲೆ ಆಶಾ ರೋಷ

ಮುಂಬೈ,

ಮಾರ್ಚ್3:
ಮಾದಕ
ಕಂಠದ
ಆಶಾ
ಭೋಸ್ಲೆ
ಅವರು
ಮುಂಬೈ
ಪೊಲೀಸರ
ಮೇಲೆ
ನೇರ
ದಾಳಿ
ಮಾಡಿದ್ದಾರೆ.
ನಮ್ಮ
ಪೊಲೀಸರು
ತುಂಬಾ
ಒರಟರು.
ಅವರಲ್ಲಿ
ದಯೆ
ಎಂಬುದೇ
ಇಲ್ಲ
ಎಂದು
ಆಶಾ
ಜಾಡಿಸಿದ್ದಾರೆ.

ಮಧ್ಯೆ
'ಅಯ್ಯೊ
ದೀದೀ,
ಬನ್ನಿ
ನಮ್ಮ
ಬೀದೀಗೆ.
ತೋರಿಸ್ತೀವಿ
ನಮ್ಮ
ಪೊಲೀಸರ
ಪ್ರತಾಪವನ್ನ'
ಎಂಬ
ಒಕ್ಕೊರಲ
ಧ್ವನಿ
ಅದಾಗ್ಲೇ
ಎಲ್ಲಿಂದಲೋ
ತೇಲಿಬಂದಂತಿದೆ.
ಇನ್ನು,
ವೇದಿಕೆಯಲ್ಲಿ
ಆಸೀನರಾಗಿದ್ದ
ಹಿರಿಯ
ಸಚಿವರಾದ
ಛಗನ್
ಭುಜಬಲ್
ಮತ್ತು
ರಾಜೇಶ್
ತೊಪೆ
ಅವರಿಗೆ
ಸಜಹವಾಗಿಯೇ
ಇದು
ಕರ್ಣ
ಕಠೋರವಾಗಿ
ಕೇಳಿಸಿದೆ.


ಸಂದರ್ಭಸಹಿತ
ವ್ಯಾಖ್ಯಾನ:
ನಾಸಿಕ್
ವಿಶ್ವವಿದ್ಯಾಲಯವು
ವಿವಿಧ
ಕ್ಷೇತ್ರಗಳಲ್ಲಿ
ಗಣನೀಯ
ಸೇವೆ
ಸಲ್ಲಿಸಿದವರಿಗೆ
ಮೊನ್ನೆ
ಮಂಗಳವಾರ
ಗೌರವ
ಡಾಕ್ಟರೇಟ್
ಪ್ರದಾನ
ಸಮಾರಂಭ
ಹಮ್ಮಿಕೊಂಡಿತ್ತು.
ಸಂದರ್ಭದಲ್ಲಿ
ರಾಜ್ಯಪಾಲ
ಶಂಕರನಾರಾಯಣ
ಅವರಿಂದ
ಡಾಕ್ಟರೇಟ್
ಸ್ವೀಕರಿಸಿದ
ಬಳಿಕ
ಆಶಾ
ಪೊಲೀಸರ
ಮೇಲೆ
ಹೀಗೆ
ಮುಗಿಬಿದ್ದರು.

id="toptextpromo">

ನನ್ನ

ಪ್ರಕಾರ
ನಮ್ಮ
ಮುಂಬೈ
ಪೊಲೀಸರಿಗೆ
ನಿಜಕ್ಕೂ
ದಯೆ
ಎಂಬುದೇ
ಇಲ್ಲ.
ತುಂಬಾ
ಒರಟರು.
ಅಲ್ರೀ,
ವಾಹನ
ಸವಾರರು
ಸಣ್ಣ
ತಪ್ಪು
ಮಾಡಿದರೂ
ಪೊಲೀಸರು
ಜೋರು
ಮಾಡುತ್ತಾರೆ.
ಯಾವುದೇ
ಪ್ರಚೋದನೆಯೂ
ಇರುವುದಿಲ್ಲ.
ಆದರೂ
ಯಾಕ್
ಹಿಂಗಾಡ್ತಾರೋ?
ಅದರ
ಬದಲು
ಅವರ
(ವಾಹನ
ಸವಾರರ)
ಭಾವನೆಗಳನ್ನು
ಘಾಸಿಗೊಳಸದೆ
ಒಂದೆರಡು
ಒಳ್ಳೆ
ಮಾತು
ಆಡಿದರೆ
ಇವರ
ಗಂಟೇನು
ಹೋಗುತ್ತದೆ?
ಎಂಬ
ಧಾಟಿಯಲ್ಲಿ
ಆಶಾ
ರೋಶವನ್ನು
ಸಾತ್ವಿಕವಾಗಿ
ಹೊರಹಾಕಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇಷ್ಟಕ್ಕೇ

ಸುಮ್ಮನಾಗದ
ಆಶಾ
ದೀದಿ
ಅವರಲ್ಲಿ
(ಪೊಲೀಸರು)
ಶಿಕ್ಷಣದ
ಕೊರತೆ
ಇದೆ.
ನನಗೆ
ಡಾಕ್ಟರೇಟ್
ನೀಡುತ್ತಿರುವ
ಯಶವಂತ್
ರಾವ್
ಚವಾಣ್
ಮಹಾರಾಷ್ಟ್ರ
ಮುಕ್ತ
ವಿಶ್ವವಿದ್ಯಾಲಯದಂತಹ
ವಿವಿಗಳು
ಪೊಲೀಸರಿಗೆ
ಶಿಕ್ಷಣ
ನೀಡುವ
ಜವಾಬ್ದಾರಿ
ಹೊರಬೇಕು
ಎಂದು
ಹಿತವಚನವನ್ನೂ
ಹೇಳಿದರು.
ನನಗೇ
ಅಂತ
ಇಂತಹ
ಅನುಭವ
ಏನೂ
ಆಗಿಲ್ಲ.
ಆದರೆ
ಬೇರೆಯವರ
ಮೇಲೆ
ಪೊಲೀಸರು
ವಿನಾಕಾರಣ
ರೇಗಾಡುವುದನ್ನು
ಕಣ್ಣಾರೆ
ಕಂಡಿದ್ದೇನೆ
ಎಂದು
ಆಶಾ
ಸೇರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+