ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರ್ ವೃತ್ತಿ: ಬೆಂಗಳೂರು ಮೊದಲ ಆಯ್ಕೆ

By Mahesh
|
Google Oneindia Kannada News

Engineer Students prefer Bangalore
ಬೆಂಗಳೂರು, ಮಾ.2: ಹತ್ತರಲ್ಲಿ ಎಂಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಚಿಸುತ್ತಾರೆ. ದೆಹಲಿಗಿಂತ ಬೆಂಗಳೂರು ಉತ್ತಮ ವಾತಾವರಣ ಹೊಂದಿರುವುದು ಇದಕ್ಕೆ ಕಾರಣ ಎಂದು ಇತ್ತೀಚಿನ ಸಮೀಕ್ಷೆ ಹೇಳುತ್ತದೆ. ಅಸ್ಪರಿಂಗ್ ಮೈಂಡ್ಸ್ ರಿಸರ್ಚಿಂಗ್ ಸೆಲ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ.72 ರಷ್ಟು ವಿದ್ಯಾರ್ಥಿಗಳು ಬೆಂಗಳೂರು ನಮ್ಮ ಮೊದಲ ಆಯ್ಕೆ ಎಂದಿದ್ದಾರೆ. ದೇಶದ ಆರು ಪ್ರಮುಖ ನಗರಗಳನ್ನು ಸೂಚಿಸಿ, ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲು ನಿರ್ದೇಶಿಸಲಾಗಿತ್ತು.

ವಿಸ್ತೃತವಾದ ಮಾಹಿತಿ ತಂತ್ರಜ್ಞಾನ ಜಾಲ, ವಾತಾವರಣ, ಸಮಾನ ಮನಸ್ಕರ ಒಡನಾಟ, ಅವಕಾಶಗಲ ಆಗರ, ಉದ್ಯೋಗಾರ್ಥಿಗಳಿಗೆ ಕಾಶಿ ಇದ್ದಂತೆ ಎಂದು ಆಸ್ಪರಿಂಗ್ ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಹಿಮಾಂಶು ಅಗರವಾಲ್ ರಿಡಿಫ್.ಕಾಂಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಬೆಂಗಳೂರಿನ ನಂತರದ ಸ್ಥಾನ ರಾಜಧಾನಿ ನವ ದೆಹಲಿಗೆ ದಕ್ಕಿದೆ. ಶೇ.32 ರಷ್ಟು ವಿದ್ಯಾರ್ಥಿಗಳು ದೆಹಲಿಯಲ್ಲಿ ವೃತ್ತಿ ಆರಂಭಿಸಲು ಸೂಕ್ತ ಎಂದಿದ್ದಾರೆ.

ಬೆಂಗಳೂರಿಗೂ ಮೊದಲೇ ಐಟಿ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದ ಹೈದರಾಬಾದ್ ನ ಸೈಬರ್ ಪ್ರಪಂಚ ಕೊಂಚ ಮಂಕಾಗಿದ್ದು, ಶೇ.31 ರಷ್ಟು ಮತಗಳೊಂದಿಗೆ ಮೂರನೆ ಸ್ಥಾನ ಪಡೆದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಂತರದ ಆಯ್ಕೆಯಾದ ಪುಣೆಗೆ ಶೇ.30 ಮತಗಳು ಸಿಕ್ಕಿವೆ. ಚೆನ್ನೈ ಬಿಸಿಲಿಗೆ ಬೆದರಿರುವ ವಿದ್ಯಾರ್ಥಿಗಳು ಶೇ.23 ರಷ್ಟು ವೋಟು ನೀಡಿ ಐದನೇ ಸ್ಥಾನಕ್ಕೆ ತಳ್ಳಿದ್ದಾರೆ.

ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದಿರುವುದು ಸಮೀಕ್ಷೆ ನಡೆಸಿದವರಿಗೆ ಅಚ್ಚರಿ ಮೂಡಿಸಿದೆ. ವೃತ್ತಿ ಆರಂಭಕ್ಕೆ ಅವಕಾಶಗಳು ಹೆಚ್ಚು ಸಿಗುವ ನಗರವನ್ನು ಹೆಚ್ಚಿನ ವಿದ್ಯಾರ್ಥಿಗಳು ಆರಿಸಿದ್ದಾರೆ. ಉತ್ತಮ ನಗರಗಳ ಪಟ್ಟಿಯಲ್ಲಿ ಚಂಡೀಗಢ, ಮೈಸೂರು ಸಹಾ ಸೇರಿದ್ದು, ಮುಂದಿನ ದಿನಗಳಲ್ಲಿ ಮೊದಲ ಪಂಕ್ತಿಯಲ್ಲಿ ಈ ನಗರಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

English summary
Bangalore emerged as most preferred city for Engineering jobs. According to recruitment firm Aspiring Minds Research Cell, Student prefer Bangalore over Delhi, Hyderabad, Pune, Chennai, Mumbai for their career launch. Chandigarh and Mysore also appeared in preferred cities list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X