ನಮ್ಮ ಹೇಮಾಮಾಲಿನಿ ದೆಹಲಿ ವಿಮಾನಯಾನ ಸುಗಮ
ಬೆಂಗಳೂರು,
ಮಾ.2-ರಾಜ್ಯದಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಮಾರ್ಚ್ 3 ರಂದು ಮತದಾನ ನಡೆಯಲಿದೆ. ಅದರಲ್ಲಿ ಮತ ಚಲಾಯಿಸಲು ನಮಗೆ ಅನುಮತಿ ನೀಡಿ ಎಂದು ಅನರ್ಹ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿದೆ. ಇದರಿಂದ ಈ ಐವರೂ ಶಾಸಕರು ರಾಜ್ಯಸಭೆ ಮತದಾನಕ್ಕೂ ಅನರ್ಹರು ಎಂಬಂತಾಗಿ ಚುನಾವಣೆಗೆ ನಿಂತಿರುವ 'ಕನಸಿನ ಕನ್ಯೆ' ಹೇಮಾಮಾಲಿನಿ ನಿರಾಯಾಸ ಗೆಲುವು ಸಾಧಿಸುವ ಲಕ್ಷಣಗಳು ಹೆಚ್ಚಾಗಿವೆ. id="toptextpromo">ಸುಪ್ರೀಂಕೋರ್ಟ್‌ನ
'ತಡೆ'ಯಾಜ್ಞೆಯಿಂದ ಆಡಳಿತಾರೂಢ ಬಿಜೆಪಿಗೆ ಆನೆ ಬಲ ಬಂದಿದೆ. ಅನರ್ಹ ಶಾಸಕರ ಪೋಷಕರಾದ ಜೆಡಿಎಸ್ ಮತ್ತು ಕಾಂಗ್ರೆಸ್ ತೀರ್ಪಿನಿಂದ ಮುಖಭಂಗಕ್ಕೊಳಗಾಗಿವೆ. ಇದರ ಜತೆಗೆ ಬಿಜೆಪಿಯು ಆಪರೇಶನ್ ಕಮಲಕ್ಕೆ ಕೈಹಾಕಿರುವುದು ಪ್ರತಿಪಕ್ಷಗಳ ನಿದ್ದೆಗೆಡಿಸಿವೆ. ಆದ್ದರಿಂದ ಗುರುವಾರ ನಡೆಯಲಿರುವ ಮತದಾನ ತೀವ್ರ ಕುತೂಹಲ ಕೆರಳಿಸಿದೆ. id='are-slot-1' class='oiad oi-axt oiadv'> id='top-searched-articles'>ಸರಕಾರದ
ವಿರುದ್ಧ ಬಂಡೆದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಪೀಕರ್ ಬೋಪಯ್ಯ ಅವರು ಐವರು ಪಕ್ಷೇತರ ಶಾಸಕರು ಮತ್ತು 11 ಮಂದಿ ಆಡಳಿತಾರೂಢ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ, ಪಕ್ಷೇತರರು ಹೈಕೋರ್ಟ್ ಮೊರೆಹೋಗಿದ್ದರು. ಫೆ. 14ರಂದು ತೀರ್ಪು ಪ್ರಕಟಿಸಿದ ಹೈಕೋರ್ಟ್, ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪಕ್ಷೇತರರು ಈಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇನ್ನು, 11 ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಈಗಾಗಲೇ ಮುಗಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.











Click it and Unblock the Notifications