ಉಡುಪಿ: 13ರ ಬಾಲೆ ಮೇಲೆ ಅತ್ಯಾಚಾರ ಯತ್ನ
ಉಡುಪಿ,
ಫೆ.23 : 13 ವರ್ಷದ ಬಾಲಕಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಘಟನೆ ಕೋಟ ಸಮೀಪ ಗುಂಡ್ಮಿ ಗ್ರಾಮದಲ್ಲಿ ನಡೆದಿದೆ. ಕೋಟ ಸಮೀಪದ ತಗ್ಗಿನಬೈಲಿನ ನಿವಾಸಿ ಪ್ರಶಾಂತ ಎಂಬಾತ ಆರೋಪಿ. ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಬಾಲಕಿ ಸ್ನಾನ ಮಾಡಿ, ಬಟ್ಟೆಯಿಂದ ಮೈ ಒರಸಿಕೊಳ್ಳುವ ವೇಳೆ ಆರೋಪಿ ಪ್ರಶಾಂತ ಆಕೆಯ ಕೈ ಹಿಡಿದು ಎಳೆದಿದ್ದಾನೆ. ನಂತರ ಮಾನಭಂಗಕ್ಕೆ ಯತ್ನಿಸಿದ್ದಾನೆ. id="toptextpromo">ಈ
ವೇಳೆ ಬಾಲಕಿ ರಕ್ಷಣೆಗಾಗಿ ಬೊಬ್ಬೆ ಹಾಕತೊಡಗಿದ್ದಾಳೆ. ಆರೋಪಿಯು ಆಕೆಯ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೊಲೆ ಬೆದರಿಕೆ ಒಡ್ಡಿದ್ದಾನೆ. ಬೊಬ್ಬೆ ಹಾಕಬೇಡ, ಹೊಟ್ಟೆಗೆ ಚೂರಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ನಾನು ಇಲ್ಲಿಗೆ ಬಂದ ವಿಚಾರ ಮನೆಯವರಿಗೆ ತಿಳಿಸಬೇಡ. ತಿಳಿಸಿದರೆ, ನೀನು ಶಾಲೆಗೆ ಹೋಗುವ ಸಮಯ ದಾರಿಯಲ್ಲಿ ಕಾದು ಕುಳಿತು ಹೊಟ್ಟೆಗೆ ಚೂರಿ ಹಾಕುವುದಾಗಿ ಪ್ರಶಾಂತ ಹೆದರಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಆಕೆಯನ್ನು
ಇನ್ನಷ್ಟು ಹೆದರಿಸಿ ತನ್ನ ಕಾರ್ಯ ಪೂರೈಸಿಕೊಳ್ಳುವ ಆತುರದಲ್ಲಿ ಪ್ಯಾಂಟಿನ ಕಿಸೆಯಲ್ಲಿದ್ದ ಚೂರಿಯನ್ನು ಹೊರ ತೆಗೆದು ತೋರಿಸಿದ್ದಾನೆ. ಇದರಿಂದ ಹೆದರಿದ ಆಕೆ ಇನ್ನಷ್ಟು ಜೋರಾಗಿ ಕಿರುಚಾಡಿದಾಗ, ಮನೆಯ ಒಳಗೆ ಚೂರಿ ಬಿಸಾಡಿ ಪರಾರಿಯಾಗಿದ್ದಾನೆ. ಬಾಲಕಿ ಕೀರ್ತನಾ ತಂದೆ ಕೃಷ್ಣ ಅವರು ನೆರೆಮನೆಯವರಿಗೆ ಪರಿಚಿತನಾದ ಪ್ರಶಾಂತ ಎಂಬುವನು ಈ ಕೃತ್ಯ ಎಸೆಗಿದ್ದಾನೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಠಾಣಾ ಅಪರಾಧ ಕ್ರಮಾಂಕ 43/2011 ಕಲಂ:448,354,504,506(2) ಭಾ.ದಂ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.











Click it and Unblock the Notifications