ಕನ್ನಡ ನಾಡ ಭಾಷೆ ಮಣ್ಣಿನ ಭಾಷೆ ಮನಸಿನ ಭಾಷೆ

ಬಳ್ಳಾರಿಯಲ್ಲಿ ಫೆಬ್ರವರಿ 22ರ ಮಂಗಳವಾರ ಆಚರಿಸಲಾದ ಮಾತೃಭಾಷಾ' ದಿನಾಚರಣೆಯ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಅವರು ರ್‍ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ದಿನಾಚರಣೆ ಅಂಗವಾಗಿ ಬಚಪನ್ ಶಾಲೆ ರ್‍ಯಾಲಿಯನ್ನು ಏರ್ಪಡಿಸಿತ್ತು.
ಮತ್ತೆ ಐಟಿ ದಾಳಿ : ಬಳ್ಳಾರಿ ಜಿಲ್ಲೆಯ ಗಣಿ ಧಣಿಗಳ ನೆಮ್ಮದಿ ಮಣ್ಣುಪಾಲಾಗಿದೆ. ಐಟಿ ದಾಳಿ, ಸಿಬಿಐ ದಾಳಿ, ನೋಟೀಸ್‌ಗಳು, ಉತ್ತರಗಳು, ಲೋಕಾಯುಕ್ತರ ತನಿಖೆ ಹೀಗೇ ಹತ್ತಾರು ರೀತಿಯ ತನಿಖೆಗಳಿಗೆ ಜಿಲ್ಲೆಯ ಗಣಿ ಮತ್ತು ಗಣಿ ಉದ್ಯಮಕ್ಕೆ ಪೂರಕ ಚಟುವಟಿಕೆ ನಡೆಸುತ್ತಿದ್ದ ಉದ್ಯಮಿಗಳು ತೀವ್ರ ಇಕ್ಕಟ್ಟಿಗೆ ಗುರಿ ಆಗಿದ್ದಾರೆ.
ಮಂಗಳವಾರ ಬೆಳಗ್ಗೆ ಸುಮಾರು 7-8 ಗಂಟೆ ಸುಮಾರಿಗೆ ಐಟಿ ತಂಡ ಹೊಸಪೇಟೆಗೆ ಆಗಮಿಸಿ ಎಸ್‌ಎಂಎಸ್‌ಕೆ ಮಿನರಲ್ಸ್ ಅಂಡ್ ಲಾಜಸ್ಟಿಕ್ಸ್‌ನ ಮಾಲೀಕ ರಿಯಾಜ್ ಅವರ ಮನೆ, ಕಚೇರಿ ಸೇರಿ ನಾಲ್ಕು ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಜಿಲ್ಲೆಯ 65 ಗಣಿ ಮಾಲೀಕರಿಗೆ ಸಿಬಿಐ ನೋಟೀಸ್ ಜಾರಿ ಮಾಡಿ ಖುದ್ದಾಗಿ ಹಾಜರಾಗಲು ತಿಳಿಸಿದೆ. ಅಲ್ಲದೇ, 1998ರಿಂದ ಈವರೆಗೆ ಆಯಾ ಕಂಪನಿಗಳು ನಡೆಸಿರುವ ರಪ್ತು ವಹಿವಾಟು, ಸ್ಥಳೀಯ ವಹಿವಾಟು, ಆಯಾ ಕಂಪನಿಗಳ ನಿರ್ದೇಶಕರ ಆಯವ್ಯಯ, ಕಂಪನಿಗಳ ಆಯವ್ಯಯ ಎಲ್ಲವನ್ನೂ ಕೂಡ ಕೇಳಿದೆ. ಈ ಹಿನ್ನೆಲೆಯಲ್ಲಿ ಅಕ್ರಮ - ಅನಧಿಕೃತ ಗಣಿಗಾರಿಕೆಯ ತನಿಖೆ ಜಿಲ್ಲೆಯ ಬಹುತೇಕ ಎಲ್ಲಾ ಗಣಿ ಉದ್ಯಮಿಗಳನ್ನು ತೀವ್ರವಾಗಿ ಕಾಡುತ್ತಿದೆ. ಅನೇಕರು ಆತಂಕಕ್ಕೆ ಈಡಾಗಿದ್ದಾರೆ ಎಂದೇ ವಿಶ್ಲೇಷಿಸಲಾಗಿದೆ.












Click it and Unblock the Notifications