ಗೋಧ್ರಾ ಹತ್ಯಾಕಾಂಡ : ನ್ಯಾಯಾಲಯದ ತೀರ್ಪು ಪ್ರಕಟ

Godhra riot verdict is out
ಗೋಧ್ರಾ, ಫೆ. 22 : ಗುಜರಾತ್ ನ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 31 ಆರೋಪಿಗಳನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, 63 ಜನರನ್ನು ಆರೋಪಮುಕ್ತರನ್ನಾಗಿ ಮಾಡಿದೆ.

ಸರಿಯಾಗಿ 9 ವರ್ಷಗಳ ಹಿಂದೆ 2002ರ ಫೆಬ್ರವರಿ 27ರಂದು ನಡೆದಿದ್ದ ಭೀಕರ ಹತ್ಯಾಕಾಂಡದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಯಲ್ಲಿದ್ದ 59 ಕರಸೇವಕರನ್ನು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಜೀವವಾಗಿ ಸುಟ್ಟಹಾಕಲಾಗಿತ್ತು.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದ್ದ ಮೌಲಾನಾ ಉಮರ್ಜಿಯನ್ನು ಆರೋಪಮುಕ್ತರನ್ನಾಗಿ ಮಾಡಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಗೋಧ್ರಾ ಹತ್ಯಾಕಾಂಡ ಒಂದು ಆಕಸ್ಮಿಕ ಘಟನೆಯಲ್ಲ, ಇದು ವ್ಯವಸ್ಥಿತ ಪಿತೂರಿ ಎಂದು ನ್ಯಾಯಾಲಯ ಪ್ರಮುಖ ತೀರ್ಪು ನಿಡಿದೆ.

ಈ ಪ್ರಕರಣದಲ್ಲಿ ಒಂದು 134 ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅವರಲ್ಲಿ 16 ಜನ ತಲೆಮರೆಸಿಕೊಂಡಿದ್ದು, 13 ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. 15 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಮತ್ತು 80 ಜನರು ಜೈಲಿನಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+