ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ನೌಕರರಿಗೆ ಕಾರ್ಯಕ್ಷಮತೆ ಆಧರಿತ ಉತ್ತೇಜಕ

By Srinath
|
Google Oneindia Kannada News

Money
ನವದೆಹಲಿ, ಫೆ.21: ಕೇಂದ್ರ ಸರಕಾರದ 62 ಇಲಾಖೆಗಳ ಉದ್ಯೋಗಿಗಳು ಮುಂದಿನ ವರ್ಷದಿಂದ ತಮ್ಮ ತಮ್ಮ ಕಾರ್ಯಕ್ಷಮತೆ ಆಧಾರದಲ್ಲಿ ಹೆಚ್ಚಿನ ಸಂಬಳ ಪಡೆಯಬಹುದಾಗಿದೆ. ಸಂಬಂಧಪಟ್ಟ ಸಚಿವಾಲಯಗಳು ಅಥವಾ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ನಿಗದಿಪಡಿಸುವ ಗುರಿಗಳನ್ನು ಪೂರೈಸಬೇಕಾಗುತ್ತದೆ. ಅದರ ಆಧಾರದಲ್ಲಿ ಆಯಾ ಇಲಾಖೆಗಳು ತನ್ನ ಉದ್ಯೋಗಿಗಳಿಗೆ ಅಂಕಗಳನ್ನುನೀಡಿ, ತಕ್ಕ ಸಂಬಳವನ್ನೂ ನೀಡುತ್ತದೆ.

ಗರಿಷ್ಠ ಗುರಿ ಸಾಧನೆಯ ಆಧಾರದಲ್ಲಿ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ. 40ರಷ್ಟನ್ನು ಹೆಚ್ಚುವರಿಯಾಗಿ ಪಡೆಯಬಹುದು. ಇದೇ ವೇಳೆ ಶೇ. 70ರಷ್ಟು ಗುರಿ ಸಾಧನೆಯಾಗದಿದ್ದಲ್ಲಿ ಸೊನ್ನೆ ಉತ್ತೇಜಕ ಲಭಿಸುತ್ತದೆ! ಮುಂದಿನ ಆರ್ಥಿಕ ವರ್ಷದ ಆರಂಭದಿಂದಲೇ (2011ರ ಜೂನ್ ವೇಳೆಗೆ) ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಪದ್ಧತಿಯನ್ನು ಈಗಾಗಲೇ ಆಖೈರುಗೊಳಿಸಿದೆ.

ಕಳೆದ 22 ವರ್ಷಗಳಲ್ಲಿ ರಚಿತವಾಗಿದ್ದ ನಾನಾ ವೇತನ ಆಯೋಗಗಳೂ ಇದನ್ನೇ ಹೇಳುತ್ತಾ ಬಂದಿವೆ. ಸರಕಾರಿ ಇಲಾಖೆಗಳನ್ನು ಕಾರ್ಪೊರೇಟ್ ಸಂಸ್ಥೆಗಳಂತೆ ಕಾರ್ಯದಕ್ಷಗೊಳಿಸುವುದು ಇದರ ಉದ್ದೇಶವಾಗಿದೆ. ಹಾಗೆಂದು ಅದಕ್ಷರಿಗೆ ಇಲ್ಲಿ ದಂಡ ವಿಧಿಸುವ ಪದ್ಧತಿಯಿರುವುದಿಲ್ಲ. ಅಂತಹವರಿಗೆ ಉತ್ತೇಜಕ ಸಂಬಳ ನೀಡದಿರುವುದೇ ಒಂದು ರೀತಿಯ ಶಿಕ್ಷೆಯಾಗಿರುತ್ತದೆ.

English summary
Employees of 62 central government departments could start earning a performance-based incentive, over and above their existing salaries, from as early as the next financial year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X