ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಕಸಬ್‌ಗೆ ಗಲ್ಲು ಕಾಯಂ: ಹೈಕೋರ್ಟ್

By Srinath
|
Google Oneindia Kannada News

ಮುಂಬೈ, ಫೆ.21: ಪಾಕಿಸ್ತಾನದ ಭಯೋತ್ಪಾದಕ, ಮುಂಬೈ ದಾಳಿಯ ಪ್ರಮುಖ ಆರೋಪಿ ಮೊಹಮದ್ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ಬಾಂಬೆ ಹೈಕೋರ್ಟ್ ಸೋಮವಾರ ಕಾಯಂಗೊಳಿಸಿದೆ. ನಿರೀಕ್ಷಿತ ತೀರ್ಪು ಪ್ರಕಟವಾಗುತ್ತಿದ್ದಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಕಸಬ್ ವಕೀಲೆ ಫರಾನಾ ಷಾ ತಿಳಿಸಿದ್ದಾರೆ.

166 ಮಂದಿಯನ್ನು ಆಹುತಿ ತೆಗೆದುಕೊಂಡ ದಾಳಿ ಸಂಬಂಧ ವಿಶೇಷ ವಿಚಾರಣಾ ನ್ಯಾಯಾಲಯ ಕಸಬ್‌ಗೆ ಒಂಬತ್ತು ತಿಂಗಳ ಹಿಂದೆ ಗಲ್ಲು ಶಿಕ್ಷೆಯನ್ನು ಪ್ರಕಟಿಸಿತ್ತು. ಇದೀಗ ಬಾಂಬೆ ಹೈಕೋರ್ಟ್ ಆ ತೀರ್ಪನ್ನು ಎತ್ತಿಹಿಡಿದಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ನಿವಾಸಿ 24 ವರ್ಷದ ಕಸಬ್ ಸದ್ಯ ಇಲ್ಲಿಯ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಕಸಬ್ ಖುರಾನ್ ಪಠಿಸುತ್ತಾ ಪ್ರಾರ್ಥನೆ ಸಲ್ಲಿಸಿದ. ವಿಡಿಯೊಕಾನ್ಫರೆನ್ಸ್ ಮೂಲಕ ಕಸಬ್‌ಗೆ ಹೈಕೋರ್ಟ್ ಆದೇಶವನ್ನು ತಿಳಿಸಲಾಯಿತು.

2008ರ ನವೆಂಬರ್ 26ರಂದು ನಡೆದ ಹತ್ಯಾಕಾಂಡದಲ್ಲಿ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್, ಛತ್ರಪತಿ ಶಿವಾಜಿ ರೇಲ್ವೆ ಟರ್ಮಿನಸ್ ಮತ್ತು ಕಾಮಾ ಆಸ್ಪತ್ರೆಯಲ್ಲಿ ನಡೆದ ದಾಳಿಗಳು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಲ್ಲವೆಂದು ಹೇಳಿದ್ದು, ಮೇ 6ರಂದು ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿದ್ದಾನೆ.

English summary
Bombay high court has upheld the death sentence to Pakistani terrorist Mohammed Ajmal Kasab. The court has upheld the trial court verdict,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X