ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಸಾವಿರದ ಶರಣು

ನಗರದ ಅರಮನೆ ಮೈದಾನದಲ್ಲಿ ನಡೆಯುವ ಈ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಹಕಾರಿ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸುಮಾರು 2 ಲಕ್ಷಕ್ಕೂ ಅಧಿಕ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಊಟ ತಿಂಡಿಗೆ 180 ಕೌಂಟರ್ : ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಊಟ ಮತ್ತು ತಿಂಡಿ ನೀಡಲು 180 ಕೌಂಟರ್ ಗಳನ್ನು ತೆರೆಯಲಾಗಿದೆ. ಬೆಳಗ್ಗೆ 7 ರಿಂದ ಸುಮಾರು 600 ಕಾರ್ಯಕರ್ತರು ಊಟ, ತಿಂಡಿ ವಿತರಣೆಯಲ್ಲಿ ತೊಡಗಿರುತ್ತಾರೆ.
ಭವ್ಯ ಸ್ವಾಗತ, ಮೆರವಣಿಗೆ: ಜಿಲ್ಲಾವಾರು ದ್ವಾರ ನಿರ್ಮಿಸಲಾಗಿದ್ದು, ಆಯಾ ಜಿಲ್ಲೆಯ ಕಾರ್ಯಕರ್ತರು ಅದೇ ದ್ವಾರಗಳ ಮೂಲಕ ಪ್ರವೇಶಿಸಬೇಕು. ಸಮಾವೇಶಕ್ಕೂ ಮುನ್ನ ರಾಷ್ಟ್ರೀಯ ಅಧ್ಯಕ್ಷರನ್ನು ತೆರೆದ ವಾಹನದಲ್ಲಿ ಕಾರ್ಯಕರ್ತರು ವೇದಿಕೆಗೆ ಕರೆತರಲಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ವಾಹನಗಳಿಗೂ ಹೆಚ್ಚು ವಾಹನಗಳಿಂದ ಬರುವ ಜನರ ವಾಹನಗಳಿಗೆ ಮೈದಾನದಿಂದ 1.5 ಕಿ.ಮೀ ದೂರದಲ್ಲಿ 5 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications