ತುಮಕೂರಿನಲ್ಲಿ ನಗರ ಸಾರಿಗೆ ಸೇವೆ ಆರಂಭ

ಮೂರು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ತುಮಕೂರು ನಗರದ ಸುತ್ತಳತೆ ಇಂದು ಮೂವತ್ತು ಕಿ.ಮೀ.ಗೂ ಹೆಚ್ಚಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಟೋ ಸಂಚಾರದಿಂದ ನಗರದ ಹೊರವಲಯದ ಬಡಾವಣೆಗೆ ಸಂಚರಿಸುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಹೆಚ್ಚಿನ ದರವನ್ನು ತೆರಬೇಕಾಗಿದೆ. ಈ ಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ನಗರ ಸಾರಿಗೆಯನ್ನು ಪರಿಚಯಿಸಲಾಗುತ್ತಿದೆ.
ಪ್ರಥಮ ಹಂತವಾಗಿ ಕ್ಯಾತ್ಸಂದ್ರದಿಂದ ಹೆಗ್ಗರೆಯವರೆಗೆ ಫೆ.18ರಿಂದ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿ ಹತ್ತು ನಿಮಿಷಕ್ಕೆ ಒಂದು ನಗರ ಸಾರಿಗೆ ಬಸ್ ಸಂಚರಿಸಲಿವೆ ಎಂದು ಶಾಸಕ ಎಸ್.ಶಿವಣ್ಣ ತಿಳಿಸಿದರು.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯುವ ನಗರ ಸಾರಿಗೆ ಸಂಚಾರ ಆರಂಭ, ವಿಭಾಗೀಯ ಕಾರ್ಯಾಗಾರದ ಉದ್ಘಾಟನೆ ಹಾಗೂ ತುಮಕೂರು 2ನೆ ಘಟಕ ಶಂಕುಸ್ಥಾಪನಾ ಸಮಾರಂಭವನ್ನು ಸಾರಿಗೆ ಹಾಗೂ ಗೃಹ ಸಚಿವ ಆರ್.ಆಶೋಕ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ.ಎಸ್. ಶಿವಣ್ಣ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕೆಎಸ್ಸಾರ್ಟಿಸಿಯ ಅಧಿಕಾರಿ ಕೆ.ಆರ್.ವಿಶ್ವನಾಥ್ ತಿಳಿಸಿದ್ದಾರೆ.












Click it and Unblock the Notifications