ಬ್ಯೂಟಿ ಹಿಂದೆ ಬಿದ್ದು ಡ್ಯೂಟಿ ಮರೆತ ಚಾಲಕ ಕೃಷ್ಣ

ಉಪ್ಪಿನಂಗಡಿ -ಕಾಂಚನದ ಕಡೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿರುವ ಬಾಲು ಯಾನೆ ಬಾಲಕೃಷ್ಣ ಸಿಕ್ಕಿಬಿದ್ದ ಚಾಲಕ. ಬಸ್ ಅನ್ನು ಕಾಂಚನದ ಬಳಿ ನಿಲ್ಲಿಸುತ್ತಿದ್ದ ವೇಳೆ ಈತನಿಗೆ ಅಲ್ಲಿ ಯುವತಿ ಯೋರ್ವಳ ಪರಿಚಯವಾಗಿತ್ತು. ಆಕೆಯನ್ನು ನಿನ್ನೆ ಪುಸಲಾಯಿಸಿ ಕೊಂಡ ಬಾಲು ಬೆಳಗ್ಗೆ ಕಾಂಚನದಲ್ಲಿರುವ ಆಕೆ ಮನೆ ಬಳಿಯಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾಸಲೀಲೆಯಲ್ಲಿ ತೊಡಗಿದ್ದಾನೆ.
ಏನದು ಪೊದೆಯಲ್ಲಿ ಶಬ್ದ?: ಆಗ ಸ್ಥಳೀಯರೊಬ್ಬರು ಆ ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊದೆಯಿಂದ ಕೇಳಿ ಬಂದ ಶಬ್ದದಿಂದ ಸಂಶಯಗೊಂಡು ಸ್ಥಳಕ್ಕೆ ಆಗಮಿಸಿದಾಗ ರಾಸಲೀಲೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರನ್ನು ಸೇರಿಸಿಕೊಂಡು ಚಾಲಕನನ್ನು ತರಾಟೆಗೆ ತೆಗೆದುಕೊಂಡು ಮರಕ್ಕೆ ಕಟ್ಟಿ ಹಾಕಿದ್ದಾರೆ. ಬೆಳ್ಳಂಬೆಳಗ್ಗೆ ಮೈಬಿಸಿ ಮಾಡಿಕೊಳ್ಳುತ್ತಿದ್ದ ಚಾಲಕನಿಗೆ ಒಬ್ಬೊಬ್ಬರೇ ಥಳಿಸುವ ಮೂಲಕ ಸ್ಥಳೀಯರು ಚಳಿಯಲ್ಲಿ ನಡುಗುತ್ತಿದ್ದ ತಮ್ಮ ಕೈಗಳನ್ನು ಬಿಸಿ ಮಾಡಿಕೊಂಡಿದ್ದಾರೆ. ನಂತರ ಚಾಲಕನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಚಾಲಕನಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ ಪೊಲೀಸರು, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಎಲ್ಲಾ ಕರ್ಮಕಾಂಡ ಮುಗಿದು ಬೆಳಗ್ಗಿನ ಬಸ್ ಹೊರಡುವಷ್ಟರಲ್ಲಿ ಮಧ್ಯಾಹ್ನದ ಬಿಸಿಲು ನೆತ್ತಿ ಸುಡುತ್ತಿತ್ತು.












Click it and Unblock the Notifications