ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಲೇಶಪುರದಲ್ಲಿ ಸಿಗರೇಟ್ ಅಭಾವ, ಜಗಳ

By Mahesh
|
Google Oneindia Kannada News

Sakleshpur Cigarette Shortage
ಸಕಲೇಶಪುರ, ಫೆ.17 : ಪಟ್ಟಣದಲ್ಲಿ ಸಿಗರೇಟ್‌ನ ಕೃತಕ ಅಭಾವ ಸೃಷ್ಟಿಯಾಗಿದೆ. ಧೂಮಪಾನಿಗಳು ಹೆಚ್ಚು ಹಣ ತೆತ್ತು ಸಿಗರೇಟ್ ಸೇದುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಪಟ್ಟಣದಲ್ಲಿ ಸಿಗರೇಟ್ ಬೆಲೆ ಹೆಚ್ಚಾಗಿದ್ದು, ಕಿಂಗ್ ಲೈಟ್ 5 ರಿಂದ 7 ರುಪಾಯಿ, ಸ್ಮಾಲ್ 4 ರಿಂದ 6 ರು. ಫ್ಲ್ಯಾಕ್ಸ್ 3 ರಿಂದ 5 ರು.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಅಂಗಡಿಯವ ರನ್ನು ವಿಚಾರಿಸಿದರೆ, ಸಿಗರೇಟ್ ಸುಲಭವಾಗಿ ಸಿಗುವುದಿಲ್ಲ. ಕಾಳಸಂತೆಯಲ್ಲಿ ಸಿಗರೇಟ್ ತರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ.

ಅಭಾವ ಸೃಷ್ಟಿಯಾಗಲು ಕಾರಣ : ಪಟ್ಟಣದಲ್ಲಿ ಸಿಗರೇಟ್ ಸಗಟು ವ್ಯಾಪಾರಗಾರರಿಲ್ಲದೇ ಇರುವುದರಿಂದ ಹಾಸನದ ಜೆ.ಸಿ.ಎಂ. ರೀಟೈಲ್ ವಿತರಕರು ಪಟ್ಟಣದಲ್ಲಿ ಸಿಗರೇಟ್‌ಗಳ ವಿತರಣೆ ಮಾಡುತ್ತಾರೆ. ವಾರಕ್ಕೊಮ್ಮೆ ಪಟ್ಟಣಕ್ಕೆ ಬರುವ ಇವರು ಮುಖ್ಯ ಅಂಗಡಿಗಳಿಗೆ ಸಿಗರೇಟ್ ನೀಡಿ ಹೋಗುತ್ತಿದ್ದಾರೆ. ಈ ಅಂಗಡಿಗಳಿಂದ ಚಿಲ್ಲರೆ ವ್ಯಾಪಾರಿಗಳು ಖರೀದಿಸಲು ಹೋಗುವಾಗ ಒಂದು ಪ್ಯಾಕ್ ಸಿಗರೇಟಿಗೆ ಮುಖ ಬೆಲೆಗಿಂತ 5 ರೂ. ಗಳನ್ನು ಹೆಚ್ಚು ಪಡೆಯುತ್ತಿದ್ದಾರೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

ಸಿಗರೇಟಿಗಾಗಿ ಜಗಳ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಿಗರೇಟಿನ ಬೆಲೆ ವಿಚಾರಕ್ಕಾಗಿ ಪರಸ್ಪರ ಹೊಡೆದಾಡಿದ ಘಟನೆ ಮಂಗಳವಾರ ನಡೆದಿದೆ. ಹಾಸನ ಮೂಲದ ವ್ಯಕ್ತಿಯೊಬ್ಬರು ಹಳೇ ಬಸ್ ನಿಲ್ದಾಣದ ಜೆ.ಕೆ. ಸ್ಟೋರ್ ಎಂಬ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿದ ಸಂದರ್ಭದಲ್ಲಿ ಕಿಂಗ್ ಲೈಟ್ ಸಿಗರೇಟಿನ ಬೆಲೆ ಏಳು ರೂ. ಎಂದಿದ್ದರಿಂದ ಅಂಗಡಿ ಮಾಲೀಕ ನೊಂದಿಗೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. ಈ ಗಲಾಟೆಯಲ್ಲಿ ಕೊನೆಗೆ ಆತ ಸಿಗರೇಟು ಸೇದಿದನೋ ಬಿಟ್ಟನೋ ತಿಳಿಯಲಿಲ್ಲ.

English summary
Sakleshpur town in Hassan district is facing tempororry shortage of Cigarette. Sakleshpura has no prominentTobacco Dealers and petty shops and stalls in Sakleshpur is depends on Retailers from Hassan to provide the goods. But Scarcity of cigarette has lead to clash between and shopkeepers and customers over hike in price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X