ಬಳ್ಳಾರಿಯಲ್ಲಿ ಅದಿರು ಸಾಗಣಿಕೆದಾರರ ಮೇಲೆ ಐಟಿ ದಾಳಿ

ಹೊಸಪೇಟೆಯ ಡ್ರೀಂ ಲಾಜಸ್ಟಿಕ್‌ನ ವಿವೇಕ್ ಹೆಬ್ಬಾರ್ ಮತ್ತು ಈ ಕಂಪನಿಯ ಪಾಲುದಾರರಾದ ಪ್ರಕಾಶ್ ಮತ್ತು ಪ್ರಭು ಹೆಗಡೆ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾಳಿ ಇನ್ನೂ ಮುಂದುವರೆದಿದೆ. ಮಂಗಳವಾರ ನಸುಕಿನ 6 ಗಂಟೆಗೆ ತಂಡಗಳಾಗಿ ಹೊಸಪೇಟೆಯ ವಿವೇಕ್ ಹೆಬ್ಬಾರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆಯ 20ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ, ಎಡಬಿಡದೇ ತನಿಖೆ ಮುಂದುವರೆಸಿದೆ.
ವಿವೇಕ್ ಹೆಬ್ಬಾರ್ ಅವರ ತಂದೆ ಶಿವರಾಂ ಹೆಬ್ಬಾರ್ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಇವರು ಕಾರವಾರದ ಯಲ್ಲಾಪುರ ಮೂಲದವರು. ಅಲ್ಲದೇ, ಡ್ರೀಂ ಲಾಜಸ್ಟಿಕ್ ಕಂಪನಿಗೆ ಸೇರಿದ ಬೆಂಗಳೂರು, ಕಾರವಾರ ಮತ್ತು ಇನ್ನಿತರೆಡೆಯ ಎಲ್ಲಾ ಕೇಂದ್ರಗಳ ಮೇಲೆ ಕೂಡ ದಾಳಿ ನಡೆದಿದೆ.
ಇವರಲ್ಲದೇ ಸಂಪ್ರದಾಯದಂತೆ ವಿವಿಧ ಲಾಜಸ್ಟಿಕ್ ಕಂಪನಿಗಳನ್ನು ನಡೆಸುತ್ತಿದ್ದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಕಚೇರಿ, ಮನೆಗಳ ಮೇಲೂ ದಾಳಿ ನಡೆದಿದೆ.












Click it and Unblock the Notifications