ವೀರಶೈವ ಸ್ವಾಮೀಜಿಗಳೆದುರಲ್ಲಿ ಸಾಮೂಹಿಕ ವಿವಾಹ

ಬಳ್ಳಾರಿ, ಫೆ. 14 : ದರೂರು ಗ್ರಾಮದ ಶ್ರೀ ಸಂಗನಬಸವೇಶ್ವರ ಮಠದಲ್ಲಿ ಫೆಬ್ರವರಿ 17ರ ಗುರುವಾರ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಕೊಟ್ಟೂರೇಶ್ವರ ಮಹಾದ್ವಾರದ ಉದ್ಘಾಟನೆ, ಶ್ರೀ ಎಡೆಯೂರು ಸಿದ್ದಲಿಂಗ ಮಹಾಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವ ನಡೆಯಲಿದೆ.

ಅಡವಿ ಅಮರೇಶ್ವರ ಕ್ಷೇತ್ರದ ಶಾಂತಮಲ್ಲ ಸ್ವಾಮೀಜಿ, ಗರಗ ನಾಗಲಾಪುರ ಒಪ್ಪತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಸಂತೆಕಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಯದ್ದಲದಡ್ಡಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠ ಸಿದ್ಧಲಿಂಗ ಸ್ವಾಮೀಜಿ, ಜಮಖಂಡಿ ಓಲೇಮಠದ ಡಾ. ಅಭಿನವ ಕುಮಾರ ಸ್ವಾಮೀಜಿ, ಕರೆಗುಡ್ಡದ ಮಹಾಂತ ಲಿಂಗ ಶಿವಾಚಾರ್ಯ, ದರೂರು ಕೊಟ್ಟೂರು ದೇವರು, ಕೊಂಚಗೇರಿ ಶಿವಶರಣ ಶಿವಪ್ಪ ತಾತನವರು ದಿವ್ಯ ಸಾನ್ನಿಧ್ಯ ವಹಿಸುವರು.

ಸಂಸದ ಶಿವರಾಮೇಗೌಡ, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಮೃತ್ಯುಂಜಯ ಜಿನಗ, ಮಾಜಿ ಶಾಸಕರಾದ ಟಿ.ಎಂ. ಚಂದ್ರಶೇಖರಯ್ಯ, ಎಂ. ಶಂಕರರೆಡ್ಡಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಕೆ. ಮಲಿಕಾರ್ಜುನ ಸ್ವಾಮಿ, ಬುಡಾ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಚೊಕ್ಕಬಸವನ ಗೌಡ, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ. ವಸಂತಗೌಡ, ಬಿ. ಮಲ್ಲಮ್ಮ ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+