ಶಾಶ್ವತ ನೀರಾವರಿ: ಚಿಕ್ಕಬಳ್ಳಾಪುರ ಬಂದ್ ಶಾಂತಿಯುತ
ಚಿಕ್ಕಬಳ್ಳಾಪುರ,
ಫೆ. 14: ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಆಗ್ರಹಿಸಿ ಸೋಮವಾರ ನಡೆದಿರುವ ಬಂದ್ ಬಹುತೇಕ ಶಾಂತವಾಗಿದೆ. ಆದರೆ ಶಿಡ್ಲಘಟ್ಟ, ಬಾಗೇಪಲ್ಲಿ ಸೇರಿದಂತೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಬಸ್ ಸಂಚಾರ ವಿರಳವಾಗಿದೆ. id="toptextpromo">ಬರಡು
ಜಿಲ್ಲೆಯ ಜನ ಒಂದು ದಶಕದಿಂದ ಈ ಹೋರಾಟ ನಡೆಸುತ್ತಿದ್ದಾರೆ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಡಾ. ಪರಮಶಿವಯ್ಯ ವರದಿಯನ್ವಯ ಮಳೆಗಾಲದಲ್ಲಿ ಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನುಬಯಲು ಸೀಮೆ ಜಿಲ್ಲೆಗೆ ಹರಿಸುವ ಯೋಜನೆಯ ಸಮೀಕ್ಷೆಗೆ 2.5 ಕೋಟಿ ರು. ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಯೋಜನೆಯ ಅನುಷ್ಠಾನಕ್ಕೆ ಆಸಕ್ತಿ ತೋರಲಿಲ್ಲ. id='are-slot-1' class='oiad oi-axt oiadv'> id='top-searched-articles'>ತಣ್ಣಗಾಗಿದ್ದ
ಹೋರಾಟ ಈ ಮತ್ತೊಮ್ಮೆ ಶಕ್ತಿ ಪಡೆದುಕೊಂಡಿದೆ. ಸಾರ್ವಜನಿಕರೂ ಭಾರಿ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ವಿವಿಧ ತಾಲೂಕುಗಳಲ್ಲಿ ನಾನಾ ಸಂಘಟನೆಗಳು ಹೋರಾಟ ನಡೆಸಿದ್ದವು. ಈಗ ಬಂದ್ ಮಾಡಿ ಮತ್ತೊಮ್ಮೆ ಒತ್ತಡ ಹೇರಲು ಮುಂದಾಗಿದೆ.











Click it and Unblock the Notifications