ಬಳ್ಳಾರಿ: ವಂಚಕ ನೌಕರನ ನಕಲಿ ಕಿಡ್ನಾಪ್ ಪ್ರಸಂಗ

ತುಂಗಭದ್ರಾ ಜಲಮಂಡಲಿಯ ಅಧಿಕಾರಿಗಳ ಆದೇಶದ ಮೇರೆಗೆ ಹೊಸಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಿಂದ 12,73,000 ರುಪಾಯಿ ನಗದನ್ನು ಪಡೆದು ಕಚೇರಿಗೆ ಹಿಂದಿರುಗುವ ಮಾರ್ಗದಲ್ಲಿ ಐವರಿಂದ ಅಪಹರಣಕ್ಕೆ ಒಳಗಾಗಿದ್ದಾಗಿ ಮನೆಗೆ ಮಾಹಿತಿ ನೀಡಿದ್ದನು.
ನಜೀರ್ ಕರೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಟವರ್ ಪತ್ತೆ ಮಾಡಿ ಆತನನ್ನು ಬಳ್ಳಾರಿಯ ರಾಜಾ ಡಿಲಕ್ಸ್ ಲಾಡ್ಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಯಿಂದ 12,12,300 ರುಪಾಯಿ ನಗದು, ಹೊಸಪೇಟೆಯ ಸಾಯಿ ಆಟೋಮೊಬೈಲ್ಸ್‌ನಿಂದ ಖರೀದಿಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿ ನಜೀರ್ ಐಷಾರಾಮಿ ಜೀವನ ನಡೆಸಲು ಲಕ್ಷಾಂತರ ರುಪಾಯಿ ಕೈಗೆ ಸಿಕ್ಕ ಕೂಡಲೇ ಅಪಹರಣದ ನಾಟಕ ಆಡಿದ್ದು, ಟಿಬಿ ಬೋರ್ಡ್ ಹಾಗೂ ಅಧಿಕಾರಿಗಳಿಗೆ ವಂಚಿಸುವ ಸಂಚು ತನ್ನಲ್ಲಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ವಿವರಿಸಿದರು.












Click it and Unblock the Notifications