ಕೊನೆಗೂ ಗಿಬ್ಸ್‌ಗೆ ಟೈ ಕೊಟ್ಟ ಒಬಾಮಾ!

2004ರ ಸಮಯ. ಒಬಾಮಾ ಆಗಿನ್ನೂ ದೊಡ್ಡಣ್ಣ ಅಂದರೆ ಅಮೆರಿಕದ ಅಧ್ಯಕ್ಷಗದ್ದಿಗೆ ಏರಿರಲಿಲ್ಲ. ಆದರೆ ಪ್ರಯತ್ನಗಳು ಸಾಗಿದ್ದವು. ಡೆಮಾಕ್ರೆಟಿಕ್ ಸಭೆಯನ್ನುದ್ದೇಶಿಸಿ ಬೋಸ್ಟನ್‌ನಲ್ಲಿ ಭಾಷಣ ಬಿಗಿಯಬೇಕಿತ್ತು. ಆ ಭಾಷಣ ಮುಂದೆ ಐತಿಹಾಸಿಕ ಎನಿಸಿತಾದರೂ ಸಭೆಗೂ ಮುನ್ನ ವೈಯಕ್ತಿಕವಾಗಿ ಒಬಾಮಾ ವಿಚಿತ್ರ ಪ್ರಸಂಗದಲ್ಲಿ ಸಿಲುಕಿದರು.
ಭಾಷಣದ ಸಿದ್ಧತೆಯಲ್ಲಿದ್ದ ಒಬಾಮಾ ಅವರ ಕೊರಳನ್ನು ಅಲಂಕರಿಸುವ ಜವಾಬ್ದಾರಿಯನ್ನು ಅವರ ಪತ್ನಿ ಮಿಷೆಲ್ ಹೊತ್ತಿದ್ದರು. ಹತ್ತಾರು ನಿಮಿಷ ಐದಾರು ಟೈಗಳಿಗೆ ಟ್ರೈ ಕೊಡುವುದರಲ್ಲೇ ಒಬಾಮಾರ ಅಮೂಲ್ಯ ಕಾಲ ಹರಣವಾಗಿತ್ತು. ಆಗ ಒಬಾಮಾ ಕಣ್ಣಿಗೆ ಬಿದ್ದಿದ್ದು ಎದುರಿಗೇ ಇದ್ದ ಮಾಧ್ಯಮ ಮಿತ್ರ ರಾಬರ್ಟ್ ಗಿಬ್ಸ್. ಪಟಕ್ಕನೇ ಗಿಬ್ಸ್‌ರ ಟೈ ಕಿತ್ತುಕೊಂಡ ಒಬಾಮಾ ಅದನ್ನು ಕೊರಳಿಗೆ ಲಗತ್ತಿಸಿಯೇ ಬಿಟ್ಟರು. ಮುಂದ, ಭಾಷಣ ಬಿಗಿಯಲು ದೌಡಾಯಿಸಿದರು.
ಪ್ರಸಂಗಾವಧಾನ ಈಗೇಕೆ?
ಈ ಪ್ರಸಂಗ ಈಗ ನೆನೆಪಿಸಿಕೊಳ್ಳಲು ಕಾರಣವೂ ಇದೆ. ಅತ್ತ ಈಜಿಪ್ಟ್ ಬೆಳವಣಿಗೆ ಬಗ್ಗೆ ಅಮೆರಿಕ ಅಧ್ಯಕ್ಷ ಒಬಾಮಾ ತಲೆಕೆಡಿಕೊಳ್ಳಬೇಕಾದ ಸಂದರ್ಭದಲ್ಲೇ ಅವರ ಆಪ್ತ ಮಿತ್ರ, ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಇತ್ತೀಚೆಗೆ ನಿವೃತ್ತಗೊಂಡ ರಾಬರ್ಟ್ ಗಿಬ್ಸ್‌ಗೆ ಶ್ವೇತ ಭವನದಲ್ಲಿ ಅಂತಿಮ ದಿನ.
ಒಬಾಮಾ, ಅದನ್ನು ಎಂದೂ ಮರೆಯದ ದಿನವನ್ನಾಗಿಸ ಬಯಸಿದರು. ಗಿಬ್ಸ್ ಭುಜದ ಮೇಲೆ ಕೈಹಾಕಿಕೊಂಡೇ ಮಾಧ್ಯಮಗಳೆದುರು ಕಾಣಿಸಿಕೊಂಡ ಅವರು ಆರು ವರ್ಷಗಳ ಹಿಂದೆ ಗಿಬ್ಸ್ ಕೊರಳಪಟ್ಟಿಗೆ ಕೈಹಾಕಿ ಕಿತ್ತುಕೊಂಡಿದ್ದ ತಿಳಿ ನೀಲಿ ಬಣ್ಣದ ಆಕರ್ಷಕ ಟೈಅನ್ನು ಅವರಿಗೇ ತೊಡಿಸಿ, ಸಂಭ್ರಮಿಸಿದರು. ಕೊರಳ(ಪಟ್ಟಿ) ಗೆಳೆಯನ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications