ಅಶೋಕ್ ಖೇಣಿಯಿಂದ ಹೊಸ ಪಕ್ಷ ಉದಯ?

ಎಲ್ಲ ಪಕ್ಷದವರೂ ಭೂ ಕಬಳಿಕೆಯಲ್ಲಿ ತೊಡಗಿದ್ದು, ಹಣ ಗಳಿಕೆಗಾಗಿಯೇ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು, ಜನತೆಯ ಹಿತ ಕಾಪಾಡುವುದಕ್ಕಲ್ಲ. ಬೇನಾಮಿ ಹೆಸರಲ್ಲಿ ಭೂ ಕಬಳಿಕೆ ರಾಜಕಾರಣಿಗಳ ಕೆಲಸವಾಗಿದೆ. ಭೂಸ್ವಾಧೀನ ಮಾಡಿ ಬೇನಾಮಿ ಹೆಸರಲ್ಲಿ ಭೂ ಕಬಳಿಕೆ ಮಾಡಿರುವ ಬಗ್ಗೆ ತನಿಖೆಯಾಗಬೇಕು. ರಾಜ್ಯದಲ್ಲಿ ಆಡಳಿತ ನಡೆಸಿದ ಮೂರೂ ಪಕ್ಷದವರು ಕಳ್ಳರೇ ಎಂದು ಖೇಣಿ ಅಪಹಾಸ್ಯ ಮಾಡಿದರು.
ಗ್ರಾಮೀಣ ಅಭಿವೃದ್ಧಿ ಮಂತ್ರ: ನೂತನ ಪಕ್ಷ ರಚಿಸಿದ ನಂತರ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರೊಂದಿಗೆ, ಯುವಕರನ್ನು ಮತ್ತು ಪ್ರಾಮಾಣಿಕ ಹಿರಿಯ ನಾಯಕರನ್ನು ಆಯ್ಕೆ ಮಾಡಿ ಜನರ ಸೇವೆ ಮಾಡುವುದಾಗಿ ಖೇಣಿ ತಿಳಿಸಿದರು.
10 ಜನ ಜೈಲಿಗೆ: ನೈಸ್ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ನಂತರ ಮುಖ್ಯ ಕಾರ್ಯದರ್ಶಿ, ಐಎಎಸ್, ಐಪಿಎಸ್ ಅಧಿಕಾರಿಗಳು, ಹಾಲಿ, ಮಾಜಿ ಶಾಸಕರು, ಸಚಿವರು ಸೇರಿದಂತೆ ಒಟ್ಟು ಹತ್ತು ಜನ ಜೈಲಿಗೆ ಹೋಗಲಿದ್ದಾರೆ ಎಂದು ಖೇಣಿ ಭವಿಷ್ಯ ನುಡಿದರು.












Click it and Unblock the Notifications