ಭ್ರಷ್ಟಾಚಾರ: ಕೇರಳದ ಮಾಜಿ ಸಚಿವಗೆ ಕೊನೆಗೂ ಶಿಕ್ಷೆ
ಹೊಸದಿಲ್ಲಿ,
ಫೆ.10: ಕೇರಳದ ಮಾಜಿ ಇಂಧನ ಸಚಿವ ಮತ್ತು ಕಾಂಗ್ರೆಸ್ ನಾಯಕ ಆರ್. ಬಾಲಕೃಷ್ಣನನ್ ಪಿಳ್ಳೈ (76) ಮತ್ತು ಇತರೆ ಇಬ್ಬರಿಗೆ ಇದಮಲಯಾರ್ ಅಣೆಕಟ್ಟೆ ನಿರ್ಮಾಣ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗುರುವಾರ ಒಂದು ವರ್ಷದ ಕಠಿಣ ಶಿಕ್ಷೆ ವಿಧಿಸಿದೆ. ಕುತೂಹಲಕರ ಸಂಗತಿಯೆಂದರೆ 1982ರಲ್ಲಿ ನಡೆದಿದ್ದ ಈ ಪ್ರಕರಣದ ವಿರುದ್ಧ 1991ರಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ಇದೀಗ 2011ರಲ್ಲಿ ಸುಪ್ರೀಂ ತೀರ್ಪು ಹೊರಬಿದ್ದಿದೆ. id="toptextpromo">ಇದಮಲಾರ್
ವಿದ್ಯುತ್ ಯೋಜನೆ ಸಂಬಂಧ ಗುತ್ತಿಗೆದಾರ ಪಾಲೋಸ್ (ದಿವಂಗತ) ಜತೆ ಮಾಜಿ ಸಚಿವರು ಶಾಮೀಲಾಗಿ ಅತ್ಯಧಿಕ ದರ ನಿಗದಿಪಡಿಸಿ, ರಾಜ್ಯ ಬೊಕ್ಕಸಕ್ಕೆ 2 ಕೋಟಿ ರು. ನಷ್ಟ ಉಂಟು ಮಾಡಿದ್ದರು ಎಂದು ಮೇಲ್ಮನವಿ ಸಲ್ಲಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಅಂದು
ಪ್ರತಿಪಕ್ಷ ನಾಯಕರಾಗಿದ್ದ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ವಿ.ಎಸ್. ಅಚ್ಯುತಾನಂದನ್ (86) ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಪ್ರಮುಖ ಸಾಕ್ಷ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪ್ರಕರಣವನ್ನು ಕೈಬಿಟ್ಟ ರಾಜ್ಯ ಹೈಕೋರ್ಟ್‌ಅನ್ನು ನ್ಯಾಯಪೀಠ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿತು.











Click it and Unblock the Notifications