ಇನ್ಫೋಸಿಸ್ ಉದ್ಯೋಗಿ ನಿಗೂಢ ಸಾವು?

ಈಕೆ ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರದ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದಳು. ಇನ್ನೊಂದು ಕೋಣೆಯಲ್ಲಿ ರಾಬಿನ್ ಮಂಡನ್ ಎಂಬಾತ ವಾಸವಿದ್ದನು. ಇಬ್ಬರ ನಡುವೆ ಹಲವು ವರ್ಷಗಳಿಂದ ಪ್ರೇಮವಿತ್ತು. ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಬಂದಿದ್ದರು. ಊಟ ಮುಗಿಸಿ ಕಟ್ಟಡದ ಮೇಲೆ ರಾತ್ರಿ ಸುಮಾರು 11 ಗಂಟೆಗೆ ವಿಹಾರಕ್ಕೆ ಹೋಗಿದ್ದಾಗ ಸ್ವಾಗತಿಕಾ ಹಾಗೂ ರಾಬಿನ್ ಹೋಗಿದ್ದಾರೆ. ಮೂರನೇ ಮಹಡಿಯ ಗ್ರಿಲ್ ಮೇಲೆ ಕಾಲಿಟ್ಟು ಮಾತನಾಡುತ್ತಿದ್ದ ಸ್ವಾಗತಿಕಾ ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಈ ಸಮಯಕ್ಕೆ ಸರಿಯಾಗಿ ನೀರು ತರಲು ರಾಬಿನ್ ಒಳ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಜಾರ್ಖಂಡ್ ಮೂಲದವರಾಗಿದ್ದು, ಇಬ್ಬರ ಕುಟುಂಬದವರು ಇವರ ಪ್ರೀತಿಯನ್ನು ಒಪ್ಪಿಕೊಂಡು ವಿವಾಹ ನಿಶ್ಚಿತಾರ್ಥಕ್ಕೆ ಏರ್ಪಾಟು ಮಾಡಿದ್ದರು. ಮಂಡೇಲಾ ಜಿಗಣಿ ಸಮೀಪ ಎಪಿಸಿ ಕಂಪೆನಿಯ ಉದ್ಯೋಗಿ. ಸ್ವಾಗತಿಕಾ ಬಿಎಸ್ ಇ ಓದಿ, ಇನ್ಫೋಸಿಸ್ ನಲ್ಲಿ 2008ರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು.
ಆದರೆ, ಆಕೆಗೂ ರಾಬಿನ್ ಮನಸ್ತಾಪವಿತ್ತೇ? ಇದು ಆಕಸ್ಮಿಕ ಸಾವೇ ಅಥವಾ ಸಾವಿನ ಹಿಂದೆ ರಾಬಿನ್ ಕೈವಾಡ ಏನಾದರೂ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ ಐ ಪಿ ಗುಂಡಪ್ಪ ಹೇಳಿದ್ದಾರೆ.












Click it and Unblock the Notifications