ತೀರ್ಥಹಳ್ಳಿ : ಮಗನಿಗೆ ಗುಂಡು ಹೊಡೆದ ಅಪ್ಪ

Shootout in Handige, Thirthahalli
ಶಿವಮೊಗ್ಗ, ಫೆ.7: ಸ್ವಂತ ತಂದೆಯೇ ತನ್ನ ಮಗನ ಮೇಲೆ ಗುಂಡು ಹಾರಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಡಿಗೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ತಂದೆ ಶಂಕರಪ್ಪ ಅಲಿಯಾಸ್ ಶಂಕರ ಗೌಡ (55) ಎಂಬವರು ಗುಂಡು ಹಾರಿಸಿದ ವ್ಯಕ್ತಿ. ಪಾನಮತ್ತರಾಗಿದ್ದ ಈತ ಅವರ ಮಗ ಸುಧೀರ್ (25) ಅವರ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಸುಧೀರ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಶಂಕರಪ್ಪ ತಲೆಮರೆಸಿಕೊಂಡಿದ್ದು, ಆತನ ಶೋಧಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯ ಪಿಎಸ್‌ಐ ರಂಗಶಾಮಯ್ಯ, ಎಎಸ್‌ಐ ಉಪಾಧ್ಯಾಯ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ: ಪೊಲೀಸರು ಹೇಳುವ ಪ್ರಕಾರ ಶಂಕರಪ್ಪ ಸಾಲ ಮಾಡಿಕೊಂಡಿದ್ದು, ಕುಡಿತದ ಚಟವಿತ್ತು. ನಿನ್ನೆ ರಾತ್ರಿ ಸಾಲ ಮಾಡದಂತೆ ತಂದೆಗೆ ಪುತ್ರ ಸುಧೀರ್ ಬುದ್ದಿಮಾತು ಹೇಳಿದ್ದ ಎನ್ನಲಾಗಿದ್ದು, ಈ ಸಂದಭರ್ದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು, ಕೈ ಕೈ ಮಿಲಾವಣೆ ಹಂತಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಶಂಕರಪ್ಪ ಮನೆಯಲ್ಲಿದ್ದ ನಾಡ ಬಂದೂಕಿನಿಂದ ಪುತ್ರನ ಮೇಲೆ ಗುಂಡು ಹಾರಿಸಿದ್ದಾರೆ. ತಕ್ಷಣವೇ ಮನೆಯವರು ಹಾಗೂ ಸಾರ್ವಜನಿಕರು ಸುಧೀರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+