ಬೆಲೆಯೇರಿಕೆ ವಿರೋಧಿ ಮೆರವಣಿಗೆಯಲ್ಲಿ ದೇವೇಗೌಡ
ಬೆಂಗಳೂರು,
ಫೆ.8- ಬೆಲೆಯೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನಗರದಲ್ಲಿ ಮಂಗಳವಾರ ಬೃಹತ್ ರ‌್ಯಾಲಿ ನಡೆಸಿದರು. id="toptextpromo"> ಜೆಡಿಎಸ್ ಮತ್ತು ಎಡರಂಗ ಹಮ್ಮಿಕೊಂಡಿದ್ದ ರ‌್ಯಾಲಿ ನೇತೃತ್ವ ವಹಿಸಿದ್ದ ದೇವೇಗೌಡ, ಜನ ಬೆಲೆಯೇರಿಕೆಯಿಂದ ತತ್ತರಿಸಿದ್ದಾರೆ. ಜನಪರ ಹೋರಾಟಕ್ಕೆ ನಾನು ಸದಾ ಸಿದ್ಧ. ಎರಡೂ ಸರಕಾರಗಳು ತಕ್ಷಣ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು ಎಂದು ಗುಡುಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಳಗ್ಗೆ
ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯಿಂದ ಆರಂಭವಾದ ರ‌್ಯಾಲಿಯಲ್ಲಿ ದೇವೇಗೌಡ ಅವರು ಕಾರ್ಯಕರ್ತರೊಂದಿಗೆ ರಾಜಭವನದವರೆಗೂ ಹೆಜ್ಜೆ ಹಾಕಿದರು. ಬೆಲೆಯೇರಿಕೆ ವಿರೋಧಿಸಿ ಬುಧವಾರ ದೆಹಲಿಯಲ್ಲೂ ಪ್ರತಿಭಟನೆ ನಡೆಸುವುದಾಗಿ ಗೌಡರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.











Click it and Unblock the Notifications