ಬೆಂಗಳೂರು ಸಂಚಾರ ಪೊಲೀಸರಿಗೆ ಬಿ-ಟ್ರ್ಯಾಕ್ ನಲ್ಲಿ ಚಿನ್ನ

shankar bidari
ಬೆಂಗಳೂರು, ಫೆ.8: ಇ-ಆಡಳಿತದಲ್ಲಿ ಬಿ-ಟ್ರ್ಯಾಕ್ ಎಂಬ ವಿನೂತನ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರಿಗೆ ಚಿನ್ನದ ಪದಕ ಲಭಿಸಿದೆ. ಕೇಂದ್ರ ಸರಕಾರವು ಗುರುವಾರ (ಫೆ. 10) ಔರಂಗಾಬಾದಿನಲ್ಲಿ ನಗರ ಪೊಲೀಸರಿಗೆ ನೀಡಲಿದೆ.

ಇ-ಆಡಳಿತದಲ್ಲಿನ ಸಾಧನೆಗಾಗಿ ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ನೀಡುವ ಈ ಪ್ರಶಸ್ತಿಯು ಇಡೀ ದೇಶದಲ್ಲಿ ಮೊದಲ ಬಾರಿಗೆ ನಮಗೆ ಸಂದಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಮಂಗಳವಾರ ತಿಳಿಸಿದರು.

ನಗರದಲ್ಲಿ ಜನಸಂಖ್ಯೆ ಮತ್ತು ವಾಹನ ಭರಾಟೆ ಒಂದೇ ಸಮನೆ ಏರುತ್ತಿದೆ. ಇದರ ಜತೆಗೆ ಮೆಟ್ರೊ, ಫ್ಲೈ ಓವರ್, ಅಂಡರ್‌ಪಾಸ್ ಮತ್ತು ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗಳು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿವೆ. ಇವುಗಳ ನಡುವೆಯೂ ಸುಗಮ ಸಂಚಾರ ಕಾಪಾಡುವುದು ಸಂಚಾರಿ ಪೊಲೀಸರಿಗೆ ಸವಾಲಿನದ್ದೇ ಆಗಿದೆ. ಅಂತಹುದರಲ್ಲಿ ಸುಗಮ, ಸುರಕ್ಷಿತ ಸಂಚಾರ ಕಾಯ್ದುಕೊಳ್ಳುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಚಿನ್ನದ ಗರಿಗೆ ಭಾಜನರಾಗಿದ್ದಾರೆ ಎಂದು ಬಿದರಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ 40 ಲಕ್ಷ ವಾಹನಗಳು ಓಡಾಡುತ್ತಿವೆ. ಇದರಲ್ಲಿ ನಗರವು ದೆಹಲಿ ಬಳಿಕ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ, 2007ರಲ್ಲಿ 6590 ರಸ್ತೆ ಅಪಘಾತಗಳು ಸಂಭವಿಸಿದ್ದವು. 2010ರಲ್ಲಿ ಈ ಪ್ರಮಾಣ 5,343 ಕ್ಕೆ ಕುಸಿದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಏನಿದು ಬಿ-ಟ್ರ್ಯಾಕ್ ?:

ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಇ-ಆಡಳಿತವನ್ನು ಕಾರ್ಯರೂಪಕ್ಕೆ ತರುವುದು. 2-3 ವರ್ಷಗಳಿಂದ ನಗರದಲ್ಲಿ ಸಂಚಾರ ನಿಯಂತ್ರಣ ಕ್ರಮಗಳು ಸಂಪೂರ್ಣವಾಗಿ ಇ-ಆಡಳಿತದಲ್ಲಿದ್ದು, ಕಾಗದ ರಹಿತವಾಗಿದೆ. ರಾಜ್ಯ ಸರಕಾರದ ಆರ್ಥಿಕ ನೆರವಿನೊಂದಿಗೆ 120 ಕೋಟಿ ರು. ವೆಚ್ಚದ ಈ ಯೋಜನೆಯನ್ನು 2008 ಮತ್ತು 2010ನೇ ಅವಧಿಯಲ್ಲಿ ಬಿ-ಟ್ರ್ಯಾಕ್ ಅನ್ನು ಯಶಸ್ವಿಯಾಗಿ ಅಳವಡಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+