ವಿಷ್ಣು ಹೆಸರಲ್ಲಿ ರಸ್ತೆ, ಪಾರ್ಕ್;ಆಕ್ಷೇಪವಿದ್ದರೆ ಸಲ್ಲಿಸಿ

ಬಿಬಿಎಂಪಿ ವ್ಯಾಪ್ತಿಯ ಸರ್ಜಾಪುರದಿಂದ ಕೆಂಗೇರಿ ಮಾರ್ಗಕ್ಕೆ 'ಡಾ. ವಿಷ್ಣುವರ್ಧನ್ ರಸ್ತೆ' ಎಂದು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಪಟ್ಟಾಭಿರಾಮನಗರ ವ್ಯಾಪ್ತಿಯ ಜಯನಗರ 4ನೇ "ಟಿ" ಬ್ಲಾಕ್ ಬಡಾವಣೆಯ 28ನೇ ಮುಖ್ಯರಸ್ತೆ ಹಾಗೂ 35ನೇ ಅಡ್ಡರಸ್ತೆ ನಡುವಿರುವ ವಿಶ್ರಾಂತಿ ವನಕ್ಕೆ 'ಡಾ. ವಿಷ್ಣುವರ್ಧನ್ ವಿಶ್ರಾಂತಿ ವನ' ಎಂದು ನಾಮಕರಣ ಮಾಡಲು ನಿರ್ಣಯಿಸಲಾಗಿದೆ.
ಇತ್ತೀಚೆಗೆ ಬಳ್ಳಾರಿಯಲ್ಲಿ ಕನ್ನಡ ಚಿತ್ರರಂಗದ ಮೇರುನಟ ಡಾ.ವಿಷ್ಣು ಹೆಸರಿನಲ್ಲಿ ಜಿಂದಾಲ್ ಅವರು ನಿರ್ಮಿಸಿರುವ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮಕ್ತಗೊಳಿಸಲಾಗಿದೆ. ಬಳ್ಳಾರಿಯಲ್ಲಿ ಡಾ. ರಾಜ್ ಪ್ರತಿಮೆ ಜನಾಕರ್ಷಣೆಯ ತಾಣವಾಗಿದೆ. ಆದರೆ, ಬೆಂಗಳೂರಿನಲ್ಲಿ ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸಲು ಬಿಬಿಎಂಪಿ ಇನ್ನೂ ಸ್ಥಳ ಹುಡುಕತ್ತಲೇ ಇದೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಮುಂದಿನ 30 ದಿನಗಳೊಳಗೆ ಆಯುಕ್ತರ ಕಚೇರಿಗೆ ಸಲ್ಲಿಸಬಹುದು ಎಂದು ಬಿಬಿಎಂಪಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ವೆಬ್ ತಾಣವನ್ನು ನೋಡಬಹುದು.
ಆಕ್ಷೇಪಣೆಗಳನ್ನು ಸಲ್ಲಿಸಬೇಕಾದ ವಿಳಾಸ :
ಆಯುಕ್ತರು,
ಬೃಹತ್ ಬೆಂಗಳೂರುಮಹಾನಗರ ಪಾಲಿಕೆ,
ನರಸಿಂಹರಾಜ ಚೌಕ,
ಬೆಂಗಳೂರು-02. [ಬಿಬಿಎಂಪಿ]












Click it and Unblock the Notifications