ರೌಡಿಶೀಟರ್ ರೆಡ್ಡಿ ಎನ್ ಕೌಂಟರ್ ನಲ್ಲಿ ಹತ

ರಾಮಮೂರ್ತಿ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸಿಸಿಬಿ ಪೊಲೀಸರಿಂದ ತೂರಿ ಬಂದ ಬುಲೆಟ್ ಗುಂಡೇಟು ತಿಂದ ರೆಡ್ಡಿ ಸ್ಥಳದಲ್ಲೇ ಮೃತನಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿದ್ದ ನಾಗೇಂದ್ರ ರೆಡ್ಡಿ ಹತ್ಯೆಗೆ ಇಂದು ಅಂತಿಮ ಕಾಲ ಕೂಡಿ ಬಂದಿತ್ತು.
ಬೆಳಗಾವಿ ಜೈಲಿನಲ್ಲಿದ್ದ ರೆಡ್ಡಿ, ಅಲ್ಲಿ ಒಬ್ಬ ಪೇದೆಯನ್ನು ಕೊಂದು ತಲೆ ಮರೆಸಿಕೊಂಡಿದ್ದ. ವಿಶಾಖಪಟ್ಟನದಲ್ಲಿ ಒಂದು ಹತ್ಯೆ ಕೇಸ್ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು ಐದು ಕೊಲೆ ಕೇಸುಗಳು ಈತನ ಮೇಲಿದೆ. ಇದಲ್ಲದೆ, ಇಂಗ್ಲೆಂಡ್ ಗೆ ತೆರಳಿದ್ದ ರೆಡ್ಡಿ ನಂತರ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ಅನ್ನು ಕೊಂದು ತಲೆ ತಪ್ಪಿಸಿಕೊಂಡಿದ್ದ
ಇಂದು ಮುಂಜಾನೆ ತನ್ನ ನೆಚ್ಚಿನ ಐಷಾರಾಮಿ ಕಾರು ಹತ್ತಿ ಹೊರಟಿದ್ದ ರೆಡ್ಡಿ ಮೂಗಿಗೆ ಪೊಲೀಸರು ಬೆನ್ನತ್ತಿರುವ ವಾಸನೆ ಬಡಿದಿದೆ. ನಂತರ ಸಿನಿಮೀಯ ರೀತಿಯಲ್ಲಿ ಚೇಸ್, ಶೂಟೌಟ್ ಎಲ್ಲಾ ನಡೆದು ರೆಡ್ಡಿ ಹತ್ಯೆಯಲ್ಲಿ ಅಂತ್ಯವಾಗಿದೆ.












Click it and Unblock the Notifications