ಯಡಿಯೂರಪ್ಪ ರಾಜೀನಾಮೆ ನೀಡಲಿ : ಶತ್ರುಘ್ನ
ನವದೆಹಲಿ,
ಜ. 31 : ಅಕ್ರಮ ಭೂಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಂದುವರಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಪುನರ್ ಪರಿಶೀಲನೆ ನಡೆಸಬೇಕೆಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಸಲಹೆ ನೀಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 3 ಜಿ ಸ್ಪೆಕ್ಟ್ರಂ, ಆದರ್ಶ ಹಗರಣ ಮತ್ತು ಕಾಮನ್ ವೆಲ್ತ್ ಹಗರಣಗಳನ್ನು ಯಡಿಯೂರಪ್ಪ ಎದುರಿಸುತ್ತಿರುವ ಆರೋಪಗಳಿಗೆ ತಾಳೆ ಹಾಕಲು ಸಾಧ್ಯವಿಲ್ಲ. ಚಿಕ್ಕ ಕಳ್ಳರು, ದೊಡ್ಡ ಕಳ್ಳರು ಎಂಬರ್ಥದಲ್ಲಿ ಮಾತನಾಡುವುದು ಸರಿಯಲ್ಲ. ಕಳ್ಳ ಕಳ್ಳನೇ, ಹೀಗಾಗಿ ಆರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಮ್ಮ
ಮಗನ ವಿರುದ್ಧ ಬೆಂಗಳೂರಿನಲ್ಲಿ ಭೂಹಗರಣ ಕೇಳಿ ಬಂದಾಗಲೇ ಯಡಿಯೂರಪ್ಪ ಅದನ್ನು ಚಿವುಟಿ ಹಾಕಬೇಕಿತ್ತು. ಆದರೆ, ಅಂದು ಹಾಗಾಗಲಿಲ್ಲ. ಹೀಗಾಗಿ ಇದೀಗ ಅದು ದೊಡ್ಡದಾಗಿ ನಿಂತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಈ ವಿಷಯವನ್ನು ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಇದಕ್ಕೆ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.(ಶತ್ರುಘ್ನ ಸಿನ್ಹಾ)












Click it and Unblock the Notifications